HEALTH TIPS

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠಕ್ಕೆ ಎಚ್‍ಎಎಲ್ ಕೊಡುಗೆಯ ಕೊಠಡಿಗಳ ಉದ್ಘಾಟನೆ

ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠಕ್ಕೆ ಹಿಂದುಸ್ಥಾನ್ ಏರೋನೋಟಿಕ್ಸ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಕೊಡುಗೆಯಾಗಿ ನೀಡಿರುವ ವೃತ್ತಿಕೌಶಲ್ಯ ಲ್ಯಾಬ್ ಹಾಗೂ ಪ್ರದರ್ಶನ ಕೊಠಡಿಯನ್ನು ಶುಕ್ರವಾರ ಉದ್ಘಾಟಿಸಲಾಯಿತು. 


ಎಚ್.ಎ.ಎಲ್. ಸಂಸ್ಥೆಯ ಮಾನವ ಸಂಪನ್ಮೂಲ ನಿರ್ದೇಶಕ ಎಂ.ಜಿ.ಬಾಲಸುಬ್ರಹ್ಮಣ್ಯ ನಾಮಫಲಕ ಅನಾವರಣಗೊಳಿಸಿದರು. ಸೀತಾಂಗೋಳಿ ಎಚ್.ಎ.ಎಲ್.ನ ಸಹಾಯಕ ಅಧಿಕಾರಿ ಜೋಸೆಫ್ ಸಂತೋಷ್ ಮೊಂತೇರಿಯೋ, ಹೈದರಾಬಾದ್ ಎಚ್.ಎ.ಎಲ್. ಆಡಳಿತ ವ್ಯವಸ್ಥಾಪಕ ಎ.ಎಸ್.ಸಜಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಹವ್ಯಕ ಅಭ್ಯುದಯ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಡಾ. ವೈ.ವಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಜಯಪ್ರಕಾಶ ಪಜಿಲ, ಶ್ರೀ ಭಾರತೀ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಸುಬ್ರಹ್ಮಣ್ಯ ಕೆರೆಮೂಲೆ, ಕಾರ್ಯದರ್ಶಿ ಮಧುಸೂದನ ತಿಮ್ಮಕಜೆ, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಆಡಳಿತ ಮಂಡಳಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕ ವೃಂದ, ಪಾಲಕರು ಹಾಗೂ ಶಾಲಾ ಅಭಿಮಾನಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಂದಲೇ ಕಾರ್ಯಕ್ರಮವು ಆಯೋಜಿಸಲ್ಪಟ್ಟಿರುವುದು ಅತಿಥಿಗಳ ಗಮನಸೆಳೆಯಿತು. ಮಕ್ಕಳೇ ತಯಾರಿಸಿದ ಕರಕುಶಲ ವಸ್ತುಗಳು ಪ್ರದರ್ಶನಗೊಂಡಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries