HEALTH TIPS

ಕೋವಿಡ್‌ ಲಸಿಕೆ ಪಡೆದ ಕೆಲವರಲ್ಲಿ ಹೃದಯದ ಉರಿಯೂತ ಸಮಸ್ಯೆ: ಅಧ್ಯಯನ ವರದಿ

               ವದೆಹಲಿ: ಕೋವಿಡ್‌-19 ಲಸಿಕೆ ಪಡೆದ ನಂತರ ಕೆಲವರಲ್ಲಿ ಹೃದಯದ ಉರಿಯೂತ ಕಂಡುಬಂದಿದೆ. ದೇಹದಲ್ಲಿನ ರೋಗ ನಿರೋಧಕ ಶಕ್ತಿಗೆ ಕಾರಣವಾಗುವ ಜೀವಕೋಶಗಳ ಪ್ರತಿಕ್ರಿಯೆಯೇ ಇದಕ್ಕೆ ಕಾರಣವಾಗಿದ್ದು, ಲಸಿಕೆಯಿಂದಾಗಿ ಉತ್ಪತ್ತಿಯಾಗುವ ಪ್ರತಿಕಾಯಗಳಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

           ಅಮೆರಿಕದ ಯೇಲ್ ವಿಶ್ವವಿದ್ಯಾಲಯದ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದು, 'ಸೈನ್ಸ್‌ ಇಮ್ಯುನಾಲಜಿ' ಜರ್ನಲ್‌ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ.

             'ಕೋವಿಡ್‌ ಲಸಿಕೆ ಪಡೆದ ಕೆಲ ವ್ಯಕ್ತಿಗಳಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗುವ ಜೊತೆಗೆ ಸೈಟೊಕಿನ್‌ ಎಂಬ ಪ್ರೋಟಿನ್‌ಗಳೂ ಸೃಷ್ಟಿಯಾಗುತ್ತವೆ. ದೇಹದಲ್ಲಿ ಉರಿಯೂತ ನಿಯಂತ್ರಣಕ್ಕೆ ಈ ಸೈಟೊಕಿನ್‌ಗಳು ನೆರವಾಗುತ್ತವೆ. ಆದರೆ, ಕೋವಿಡ್‌ ಲಸಿಕೆ ಪಡೆದ ಕೆಲವರಲ್ಲಿ ಈ ಪ್ರೋಟಿನ್‌ಗಳು ಅಧಿಕ ಪ್ರಮಾಣದಲ್ಲಿ ಹಾಗೂ ವೇಗವಾಗಿ ಉತ್ಪತ್ತಿಯಾಗುವುದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ' ಎಂದು ಸಂಶೋಧಕರು ಹೇಳಿದ್ದಾರೆ.

                ಎರಡು ವರ್ಷಗಳ ಹಿಂದೆ, ಕೋವಿಡ್‌ ಲಸಿಕೆ ಪಡೆದ ಕೆಲವರಲ್ಲಿ 'ಮೈಯೊಕಾರ್ಡಿಟಿಸ್' ಎಂಬ ಹೃದಯದ ಸಮಸ್ಯೆ ಕಾಣಿಸಿಕೊಂಡಿತ್ತು. ಹೃದಯದ ಸ್ನಾಯುಗಳ ಉರಿಯೂತವೇ ಇದಕ್ಕೆ ಕಾರಣ. ಆದರೆ, ಈ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲು ನಿಖರ ಕಾರಣಗಳು ಗೊತ್ತಾಗಿರಲಿಲ್ಲ. ಈಗ, ಯೇಲ್‌ ವಿ.ವಿ ಸಂಶೋಧಕರ ತಂಡವು ಲಸಿಕೆ ಪಡೆದವರಲ್ಲಿನ ರೋಗನಿರೋಧಕ ವ್ಯವಸ್ಥೆಯ ವಿಶ್ಲೇಷಣೆ ನಡೆಸಿ, ಹೃದಯದ ಸಮಸ್ಯೆಗೆ ಕಾರಣವನ್ನು ವಿವರಿಸಿದೆ.

                  'ಆದಾಗ್ಯೂ, ಕೋವಿಡ್-19 ಸಂಬಂಧಿತ ಕಾಯಿಲೆಗಳ ವಿರುದ್ಧ ಲಸಿಕೆಯು ಪರಿಣಾಮಕಾರಿ ರಕ್ಷಣೆ ನೀಡುತ್ತದೆ' ಎಂದು ಅಮೆರಿಕದ ವಿಶ್ವವಿದ್ಯಾಲಯದ ಇಮ್ಯುನೊಬಯಾಲಜಿ ವಿಭಾಗದ ಪ್ರಾಧ್ಯಾಪಕಿ ಕೆರ‍್ರಿ ಲೂಕಾಸ್ ಹೇಳುತ್ತಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries