HEALTH TIPS

ಹೊಸ ಲುಕ್ ನಲ್ಲಿ ಎಂ.ವಿ.ಗೋವಿಂದನ್: ಪ್ಯಾಂಟ್ ಶರ್ಟ್ ನಲ್ಲಿ ಲಂಡನ್ ಗೆ ಬಂದಿಳಿದ ಸಿಪಿಎಂ ಕಾರ್ಯದರ್ಶಿ

          ತಿರುವನಂತಪುರಂ: ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್ ಅವರು ಪಕ್ಷದ ಕಾರ್ಯಕರ್ತರು ಯಾವತ್ತೂ ನೋಡುವುದಕ್ಕಿಂತ ಭಿನ್ನವಾಗಿ ಕಾಣಿಸಿಕೊಂಡರು.

           ಎಂ.ವಿ.ಗೋವಿಂದನ್ ಅವರು ಎಡಪಂಥೀಯ ಸಾಂಸ್ಕøತಿಕ ಸಂಘಟನೆಯಾದ ಸಮೀಕ್ಷಾದ ಆರನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಲಂಡನ್‍ಗೆ ತೆರಳಿರುವರು. ಸಿಪಿಎಂ ರಾಜ್ಯ ಕಾರ್ಯದರ್ಶಿ ಸಾಮಾನ್ಯ ಬಿಳಿ ಶರ್ಟ್ ಮತ್ತು ಬಿಳಿ ಧೋತಿ ಉಡುವುದಕ್ಕೆ ಭೀನ್ನವಾಗಿ ಪ್ಯಾಂಟ್ ಮತ್ತು ಬೂಟುಗಳನ್ನು ಧರಿಸಿ ಲಂಡನ್‍ನ ಗ್ವಾಟಿಕ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಎಂವಿ ಗೋವಿಂದನ್ ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

                ಈ ಚಿತ್ರವನ್ನು ಸ್ವತಃ ಎಂವಿ ಗೋವಿಂದನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಎಂ.ವಿ.ಗೋವಿಂದನ್ ಅವರನ್ನು ಬರಮಾಡಿಕೊಳ್ಳಲು ಯು.ಕೆ.ಯ ಸಮೀಕ್ಷಾ ರಾಷ್ಟ್ರೀಯ ಕಾರ್ಯದರ್ಶಿ ದಿನೇಶ್ ವೆಳ್ಳಾಪಳ್ಳಿ, ರಾಷ್ಟ್ರೀಯ ಅಧ್ಯಕ್ಷ ಶ್ರೀಕುಮಾರ್ ವೆಳ್ಳಾಪಿಳ್ಳಿ, ಚಿತ್ರ ನಿರ್ದೇಶಕ ಆಶಿಕ್ ಅಬು ಆಗಮಿಸಿದ್ದರು. ಗೋವಿಂದನ್ ತನ್ನ ಮಾಮೂಲಿ ಉಡುಗೆಗಿಂತ ಭಿನ್ನವಾಗಿ ಶರ್ಟ್-ಪ್ಯಾಂಟ್ ಧರಿಸಿ ಗಮನ ಸೆಳೆದಿರುವರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries