HEALTH TIPS

ಬಾಡಿಗೆ ತಾಯ್ತನ: ಮಕ್ಕಳನ್ನು ಬಯಸುವ ದಂಪತಿಯ ಜೀವಾಣು ಬಳಕೆ ಪ್ರಶ್ನಿಸಿದ್ದ ಅರ್ಜಿ ವಜಾ

              ವದೆಹಲಿ: ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದುಕೊಳ್ಳಲು ಮುಂದಾಗುವ ದಂಪತಿಯು ದಾನಿಗಳ ವೀರ್ಯಾಣು ಮತ್ತು ಅಂಡಾಣುಗಳನ್ನು ಬಳಸಿಕೊಳ್ಳಬಾರದು ಎಂಬ ಕೇಂದ್ರ ಆರೋಗ್ಯ ಸಚಿವಾಲಯದ ನಿಯಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ.

              ಈ ನಿಯಮದ ಕುರಿತು ಈಗಾಗಲೇ ವಿಚಾರಣೆ ನಡೆಯುತ್ತಿದೆ ಎಂದು ‌ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರಿದ್ದ ರಜಾಕಾಲದ ಪೀಠವು ಹೇಳಿದೆ. 'ನಾವು ಯಾಕಾಗಿ ಇಂಥ ಅರ್ಜಿಯನ್ನು ಸ್ವೀಕರಿಸಬೇಕು? ಪ್ರಚಾರ ಸಿಗುತ್ತದೆ ಎಂಬ ಕಾರಣಕ್ಕೆ ನೀವು ಈ ಅರ್ಜಿ ಸಲ್ಲಿಸಿದ್ದೀರಾ ಎಂದು ಪ್ರಶ್ನಿಸಿದೆ.'

                        ಬಳಿಕ, ಅರ್ಜಿದಾರರ ಪರ ಹಾಜರಿದ್ದ ವಕೀಲರು ಅರ್ಜಿಯನ್ನು ಹಿಂಪಡೆದರು.

ನಿಯಮ ಏನಿದೆ?: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 2023ರ ಮಾರ್ಚ್‌ 14ರಂದು ಈ ನಿಯಮವನ್ನು ಹೊರಡಿಸಿತ್ತು.

* ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದುಕೊಳ್ಳಲು ಬಯಸುವ ದಂಪತಿಯು, ತಮ್ಮ ವೀರ್ಯಾಣು ಮತ್ತು ಅಂಡಾಣು ನೀಡಬೇಕು ಎಂದು ನಿಯಮ ರೂಪಿಸಲಾಗಿತ್ತು

* ವಿಧವೆ ಅಥವಾ ವಿಚ್ಛೇದನ ಪಡೆದಿರುವ ಮಹಿಳೆಯು ಮಕ್ಕಳನ್ನು ಬಯಸಿದರೆ, ತನ್ನ ಅಂಡಾಣುವನ್ನು ಮತ್ತು ದಾನಿಯ ವೀರ್ಯಾಣುವನ್ನು ಬಳಸಬೇಕು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries