ತಿರುವನಂತಪುರ: ದಕ್ಷಿಣ ವಾಯುಪಡೆಯ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಬಾಲಕೃಷ್ಣನ್ ಮಣಿಕಂಠನ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಏರ್ ಮಾರ್ಷಲ್ ಅವರನ್ನು ವಾಯುಪಡೆಯ ಪ್ರಧಾನ ಕಛೇರಿಯಲ್ಲಿ ಸಿಬ್ಬಂದಿಗಳು ಗೌರವ ವಂದನೆಯೊಂದಿಗೆ ಬರಮಾಡಿಕೊಂಡರು.
ಕೊಟ್ಟಾಯಂ ಮೂಲದ ಏರ್ ಮಾರ್ಷಲ್ ಮಣಿಕಂಠನ್ ಅವರು ಕಝಕೂಟಂ ಸೈನಿಕ ಶಾಲೆ ಮತ್ತು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿ. ಅವರು 07 ಜೂನ್ 1986 ರಂದು ಭಾರತೀಯ ವಾಯುಪಡೆಗೆ ನಿಯೋಜಿಸಲ್ಪಟ್ಟರು ಮತ್ತು ವಿವಿಧ ರೀತಿಯ ಹೆಲಿಕಾಪ್ಟರ್‍ಗಳು ಮತ್ತು ಸ್ಥಿರ ವಿಂಗ್ ಏರ್‍ಕ್ರಾಫ್ಟ್‍ಗಳಲ್ಲಿ 5400 ಗಂಟೆಗಳಿಗೂ ಹೆಚ್ಚು ಹಾರಾಟ ನಡೆಸಿದ್ದಾರೆ. ಮತ್ತು ಅತ್ಯುತ್ತಮ ಹೆಲಿಕಾಪ್ಟರ್ ಯುದ್ಧ ನಾಯಕ ಮತ್ತು ಅರ್ಹ ಏರ್ ಟೀಚರ್ ಕೂಡಾ ಆಗಿದ್ದಾರೆ.
ಏರ್ ಮಾರ್ಷಲ್ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಟ್ಯಾಕ್ಟಿಕ್ಸ್ ಮತ್ತು ಏರ್ ಕಾಂಬಾಟ್ ಡೆವಲಪ್‍ಮೆಂಟ್ ಎಸ್ಟಾಬ್ಲಿμïಮೆಂಟ್ ನಲ್ಲಿ ತರಬೇತಿ ಪೂರ್ಣಗೊಳಿಸಿದ್ದಾರೆ. ಅವರು ಪ್ರಧಾನ ಹೆಲಿಕಾಪ್ಟರ್ ಘಟಕ ಮತ್ತು ಎರಡು ಪ್ರಧಾನ ವಾಯುಪಡೆ ಕೇಂದ್ರಗಳ ಉಸ್ತುವಾರಿ ವಹಿಸಿದ್ದಾರೆ.
ಅಂತರಾಷ್ಟ್ರೀಯ ರಕ್ಷಣಾ ಸಹಕಾರಕ್ಕೆ ಜವಾಬ್ದಾರರಾಗಿರುವ ಮೆಂಟೆನೆನ್ಸ್ ಕಮಾಂಡ್ ಹೆಡ್ಕ್ವಾರ್ಟರ್ಸ್ ಮತ್ತು ಇಂಟಿಗ್ರೇಟೆಡ್ ಡಿಫೆನ್ಸ್ ಸರ್ವೀಸಸ್‍ನಲ್ಲಿ ಹಿರಿಯ ವಾಯು ಮತ್ತು ಆಡಳಿತ ಅಧಿಕಾರಿ ನೇಮಕಾತಿಗಳನ್ನು ಸಹ ಅವರು ನಿರ್ವಹಿಸಿದ್ದರು. ಅವರು ವೆಲ್ಲಿಂಗ್ಟನ್‍ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್‍ನಿಂದ ಮಾಸ್ಟರ್ಸ್, ಸಿಕಂದರಾಬಾದ್ ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜ್‍ಮೆಂಟ್‍ನಿಂದ ಎಂಎಂಎಸ್ ಮತ್ತು ನವದೆಹಲಿಯ ನ್ಯಾಷನಲ್ ಡಿಫೆನ್ಸ್ ಕಾಲೇಜಿನಿಂದ ಎಂಫಿಲ್ ಪದವಿ ಪಡೆದಿದ್ದಾರೆ. ಪ್ರಸ್ತುತ ನಿಯೋಜನೆಯನ್ನು ವಹಿಸಿಕೊಳ್ಳುವ ಮೊದಲು, ಅವರು ಈಸ್ಟರ್ನ್ ಏರ್ ಕಮಾಂಡ್‍ನಲ್ಲಿ ವಾಯು ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿರುವ ಹಿರಿಯ ವಾಯು ಸಿಬ್ಬಂದಿಯಾಗಿದ್ದರು.
ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಮತ್ತು ವಿಶಿಷ್ಟ ಸೇವೆಗಾಗಿ ವಾಯುಸೇನ ಪದಕವನ್ನು ಪಡೆದಿದ್ದಾರೆ.





