HEALTH TIPS

ತಾನೂರು ದೋಣಿ ಅಪಘಾತ; ಆರೋಪಿ ಬೋಟ್ ಮಾಲೀಕ ನಾಸರ್ ನ ಬಂಧನ

               ಕೊಚ್ಚಿ: ತಾನೂರಿನ ದೋಣಿ ಪಲ್ಟಿಯಾದ ಘಟನೆಯಲ್ಲಿ ಬೋಟ್ ಮಾಲೀಕ ನಾಸರ್ ನನ್ನು ಕೊನೆಗೂ ಬಂಧಿಸಲಾಗಿದೆÀ. ಆರೋಪಿಯನ್ನು ಕೋಝಿಕ್ಕೋಡ್ ನಲ್ಲಿ ಬಂಧಿಸಲಾಗಿದೆ.

            ತಾನೂರಿನಲ್ಲಿ ನಡೆದ ದೋಣಿ ಅಪಘಾತದ ನಂತರ ನಾಸರ್ ತಲೆಮರೆಸಿಕೊಂಡಿದ್ದ. ಪೊಲೀಸರು ನಾಸರ್ ವಿರುದ್ಧ ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

             ಈ ಹಿಂದೆ ನಾಸರ್ ನ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ವಾಹನ ತಪಾಸಣೆ ವೇಳೆ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ನಾಸರ್ ನ ಸಹೋದರ ಸಲಾಮ್ ಮತ್ತು ಅವರ ನೆರೆಹೊರೆಯವರಾದ ಮುಹಮ್ಮದ್ ಶಾಫಿ ಅವರನ್ನು ಪೊಲೀಸರು ಕಾರಿನಿಂದ ವಶಕ್ಕೆ ತೆಗೆದುಕೊಂಡಿದ್ದಾರೆ. ಇವರಿಂದ ನಾಸರ್ ನ ಪೋನ್ ವಶಪಡಿಸಿಕೊಂಡ ಪೊಲೀಸರು ಆತನ ಸಹೋದರ ಹಾಗೂ ನೆರೆಹೊರೆಯವರಲ್ಲದೆ ಕಾರಿನಲ್ಲಿ ಇಬ್ಬರು ಇದ್ದರು. ಅವರನ್ನೂ ಪೆÇಲೀಸ್ ಕಸ್ಟಡಿಗೆ ತೆಗೆದುಕೊಂಡಿರುವರು. 

            ಅಪಘಾತಕ್ಕೀಡಾದ ಅಟ್ಲಾಂಟಿಕ್ ದೋಣಿಯನ್ನು ಕಾನೂನು ರೀತಿಯಲ್ಲಿ ನಿರ್ವಹಿಸದಿರುವುದು ಪತ್ತೆಯಾಗಿದೆ. ಬದಲಿಗೆ, ಇದು ಮೀನುಗಾರಿಕೆ ದೋಣಿಯಾಗಿದ್ದು, ಪ್ರವಾಸಿ ದೋಣಿಯಾಗಿ ಪರಿವರ್ತಿಸಲಾಗಿತ್ತು. ಅಲ್ಲದೆ, ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ದೋಣಿ ಸೇವೆಗೆ ಒಳಪಡಿಸಲಾಗಿತ್ತು. ಅಪಘಾತದ ಸಮಯದಲ್ಲಿ ದೋಣಿಯಲ್ಲಿ ಎರಡು ಪಟ್ಟು ಹೆಚ್ಚು ಜನರು ಇದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries