HEALTH TIPS

ವಂದೇಭಾರತ್ ಎಕ್ಸ್ ಪ್ರೆಸ್ ಮೇಲೆ ಮತ್ತೆ ದಾಳಿ: ಕಣ್ಣೂರಿನ ವಲಪಟ್ಟಣಂನಲ್ಲಿ ಘಟನೆ: ಕಿಟಕಿ ಗಾಜುಗಳಿಗೆ ಹಾನಿ

                ಕಣ್ಣೂರು: ವಂದೇಭಾರತ್ ಎಕ್ಸ್ ಪ್ರೆಸ್ ಮೇಲೆ ಮತ್ತೆ ಕಲ್ಲುತೂರಿದ ಘಟನೆ ನಡೆದಿದೆ. ವಂದೇಭಾರತಕ್ಕೆ ಕಲ್ಲು ತೂರಾಟ ನಡೆದಿರುವುದು ಇದು ಎರಡನೇ ಬಾರಿ.

             ಕಣ್ಣೂರಿನ ವಲಪಟ್ಟಣಂನಲ್ಲಿ ಕಲ್ಲು ತೂರಾಟ ನಡೆದಿದೆ. ರೈಲಿನ ಬೋಗಿಯ ಮೇಲೆ ಕಲ್ಲು ತೂರಲಾಗಿದೆ. ಕಾಸರಗೋಡಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದಾಗ ನಿನ್ನೆ ಮಧ್ಯಾಹ್ನ 3.27ಕ್ಕೆ ಈ ಘಟನೆ ನಡೆದಿದೆ. ಅನಿರೀಕ್ಷಿತ ದಾಳಿಯಲ್ಲಿ ರೈಲಿನ ಕಿಟಕಿ ಗಾಜು ಒಡೆದಿದೆ ಎಂದು ಪ್ರಾಥಮಿಕ ವರದಿ ಹೇಳಿದೆ. ಸ್ಥಳಕ್ಕೆ ಆರ್‍ಪಿಎಫ್ ಮತ್ತು ಪೊಲೀಸರು ಭೇಟಿ ನೀಡಿರುವರು. ಘಟನೆಯ ತನಿಖೆ ಮುಂದುವರಿದಿದೆ.

           ಈ ಹಿಂದೆ ಮಲಪ್ಪುರಂನ ತಿರೂರ್ ಮತ್ತು ತಾನೂರ್ ನಡುವಿನ ಕಂಪನಿಪಾಡಿ ಎಂಬ ಸ್ಥಳದಲ್ಲಿ ವಂದೇಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಘಟನೆ ಕುರಿತು ತಿರೂರು ಪೆÇಲೀಸರು ಹಾಗೂ ರೈಲ್ವೆ ಪೆÇಲೀಸರು ತನಿಖೆ ನಡೆಸಿದ್ದು, ಸಿಸಿಟಿವಿ ಇಲ್ಲದ ನಿರ್ಜನ ಸ್ಥಳದಲ್ಲಿ ಕಲ್ಲು ತೂರಾಟ ನಡೆದಿರುವುದು ತನಿಖೆಗೆ ಅಡ್ಡಿಯಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries