ಮಲಪ್ಪುರಂ: ತಾನೂರಿನಲ್ಲಿ ದೋಣಿ ಮುಳುಗಿ 22 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಆಯೋಗದ ನ್ಯಾಯಾಂಗ ಸದಸ್ಯ ಕೆ.ಬೈಜುನಾಥ್ ಅವರು, ಮಲಪ್ಪುರಂ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಮುಖ್ಯಸ್ಥರು ಮತ್ತು ಆಲಪ್ಪುಳ ಮುಖ್ಯ ಬಂದರು ಸರ್ವೇಯರ್ ಅವರು ಹತ್ತು ದಿನಗಳಲ್ಲಿ ವಿವರಣೆಯನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಿರುವರು. ಮೇ 19 ರಂದು ತಿರೂರಿನಲ್ಲಿ ವಿಚಾರಣೆ ನಡೆಯಲಿದೆ. ಈ ಕ್ರಮವು ಮಾಧ್ಯಮ ವರದಿಗಳನ್ನು ಆಧರಿಸಿದೆ.
ದೋಣಿ ಮುಳುಗಿದ ಪ್ರಕರಣದ ಆರೋಪಿ ಬೋಟ್ ಮಾಲೀಕ ನಾಸರ್ ಹಾಗೂ ಅವರ ಕಾರನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ವಾಹನ ತಪಾಸಣೆ ವೇಳೆ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ನಾಸರ್ ಅವರ ಸಹೋದರ ಸಲಾಮ್ ಮತ್ತು ಅವರ ನೆರೆಹೊರೆಯವರಾದ ಮುಹಮ್ಮದ್ ಶಾಫಿ ಅವರನ್ನು ಪೆÇಲೀಸರು ಕಾರಿನಿಂದ ವಶಕ್ಕೆ ತೆಗೆದುಕೊಂಡಿದ್ದಾರೆ.


