HEALTH TIPS

ನನ್ನ ಕೇರಳ ಪ್ರದರ್ಶನ, ಮಾರುಕಟ್ಟೆ ಮೇಳಕ್ಕೆ ಜನಪ್ರವಾಹ

                ಕಾಸರಗೋಡು: ರಾಜ್ಯ ಸರ್ಕಾರದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಕಾಞಂಗಾಡು ಅಲಮಿಪ್ಪಳ್ಳಿಯ ಹೊಸ ಬಸ್ ನಿಲ್ದಾಣ ಪ್ರದೇಶದಲ್ಲಿ ನಡೆಯುತ್ತಿರುವ ಮೈ ಕೇರಳಂ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳ ಜನಾಕರ್ಷಣೆಗೆ ಕಾರಣವಾಗುತ್ತಿದೆ.  ವಿವಿಧ ಆಕರ್ಷಣೆಗಳನ್ನು ನೋಡಲು, ಸೇವೆಗಳನ್ನು ಪಡೆಯಲು ಮತ್ತು ಕಲಾ ಕಾರ್ಯಕ್ರಮಗಳನ್ನು ಆಸ್ವಾದಿಸುವ ನಿಟ್ಟಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು  ಮೇಳಕ್ಕೆ ಆಗಮಿಸುತ್ತಿದ್ದಾರೆ.

            ಬೇಕಲಕೋಟ ಮತ್ತು ರಾಣಿಪುರಂಗೆ ಸ್ವಾಗತ ಕೋರುವ ಪ್ರವೇಶ ದ್ವಾರದ ಬಳಿ ಸೆಲ್ಫಿ ತೆಗೆದುಕೊಳ್ಳಲು ಜನತೆ ಮುಗಿಬೀಳುತ್ತಿದ್ದು, ಸಪ್ತಭಾಷಾ ಸಂಗಮಭೂಮಿಯನ್ನು ನೆನಪಿಸುವ ಏಳು ಭಾಷೆಗಳ ಮೊದಲಕ್ಷರಗಳು ದ್ವಾರದ ಪ್ರಮುಖ ಆಕರ್ಷಣೆಯಾಗುತ್ತಿದೆ.  ಬಹುತೇಕ ಸ್ಟಾಲ್ ಗಳಲ್ಲಿ ಬಣ್ಣಬಣ್ಣದ ಅಲಂಕಾರ, ಸೆಲ್ಫಿ ಪಾಯಿಂಟ್ ಗಳು ನೋಡುಗರನ್ನು ಆಕರ್ಷಿಸುತ್ತವೆ. ವಿವಿಧ ತಂತ್ರಗಳನ್ನು ಬಳಸಿ ತಯಾರಿಸಲಾಗುತ್ತದೆ. ಕಿಫ್‍ಬಿಯ ವಿಶೇಷ ಸ್ಟಾಲ್ ಮಕ್ಕಳನ್ನು ಆಕರ್ಷಿಸುತ್ತಿದೆ. ಜತೆಗೆ ಕುಟುಂಬಶ್ರೀ ಆಹಾರ ಮೇಳ ಹೆಚ್ಚಿನ ಖಾದ್ಯಪ್ರಿಯರನ್ನು ತನ್ನೆಡೆಗೆ ಆಕರ್ಷಿಸುತ್ತಿದ್ದು, ವಿವಿಧ ರುಚಿ ಸವಿಯಲು ಜನಸಾಗರವೇ ಬಂದುಸೇರುತ್ತಿದೆ. ಕುಟುಂಬಶ್ರೀ ಆಹಾರ ಮೇಳವು ಚಿಕನ್ ಬಿರಿಯಾನಿ, ಚಿಕನ್ ಸುಕ್ಕಾ, ಚಿಕನ್ ತಟ್ಟುಕಡ  ಫ್ರೈ ಸೇರಿದಂತೆ 30ಕ್ಕೂ ಹೆಚ್ಚು ಖಾದ್ಯಗಳನ್ನು ಹೊಂದಿದೆ. ನನ್ನ ಕೇರಳ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳವು ಜಿಲ್ಲೆಯ ಸಾಂಸ್ಕøತಿಕ ವೈವಿಧ್ಯತೆ ಮತ್ತು ಕೇರಳದ ಅಭಿವೃದ್ಧಿ ಸಾಧನೆಗಳನ್ನು ಎತ್ತಿ ತೋರಿಸುತ್ತಿದ್ದು, ಮೇ 9ರಂದು ಸಂಪನ್ನಗೊಳ್ಳಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries