ಕಾಸರಗೋಡು: ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್‍ರಣವೀರ್ ಚಂದ್ ಅವರನ್ನು ವರ್ಗಾಯಿಸಲಾಗಿದ್ದು, ಇವರ ಸ್ಥಾನಕ್ಕೆ ರಿಜಿಸ್ಟ್ರೇಶನ್ ಇಲಾಖೆ ಐಜಿ ಆಗಿರುವ ಇನ್‍ಭಾ ಶೇಖರ್ ಕಾಳಿಮುತ್ತು ಐಎಎಸ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಭಂಡಾರಿ ಸ್ವಾಗತ್‍ರಣವೀರ್ ಚಂದ್ ಅವರನ್ನು ಕೇರಳ ಜಲಪ್ರಾಧಿಕಾರ ಎಂ.ಡಿ ಆಗಿ ನೇಮಿಸಲಾಗಿದೆ. ಜನರೆಡೆಗೆ ತೆರಳಿ ಅವರ ಕುಂದುಕೊರತೆ ಆಲಿಸುತ್ತಿದ್ದ ಜನಪರ ಅಧಿಕಾರಿ ಹಾಗೂ ಕಾಸರಗೋಡಿನ ಪ್ರಥಮ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಮಂಗಲ್ಪಾಡಿ ಪಂಚಾಯಿತಿಯ ತ್ಯಾಜ್ಯ ಸಮಸ್ಯೆಗಳ ಬಗ್ಗೆ ಕಠಿಣ ನಿಲುವು ಕೈಗೊಳ್ಳುವ ಮೂಲಕ ತನ್ನ ದಕ್ಷತೆ ಮೆರೆದಿದ್ದರು. ಜಿಲ್ಲೆಯ ಎಲ್ಲ ಗ್ರಾಮಾಧಿಕಾರಿ ಕಚೇರಿಗಳಿಗೂ ಖುದ್ದು ಭೇಟಿ ನೀಡಿ ಜನರಿಂದ ಅಹವಾಲು ಸ್ವೀಕರಿಸಿ, ಇವುಗಳಿಗೆ ಪರಿಹಾರ ಕಲ್ಪಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.


