HEALTH TIPS

ಎಲಿಯಾಣ ದೇರಂಬಳ ಮಂದಿರದ ವಾರ್ಷಿಕೋತ್ಸವ

           ಮಂಜೇಶ್ವರ: ಎಲಿಯಾಣ ದೇರಂಬಳ ಶ್ರೀ ರಾಜರಾಜೇಶ್ವರೀ ಭಜನಾ ಮಂದಿರದ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ಜರಗಿತು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೇಮಾ ಕೆ ಭಟ್ ವಹಿಸಿದ್ದರು. ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀಯೋಗಾನಂದ ಸರಸ್ವತಿ ಸ್ವಾಮಿಗಳು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

       ಈ ಸಂದರ್ಭದಲ್ಲಿ ಕೃಷಿಕರಾದ ರಮೇಶ್ ಶೆಟ್ಟಿ ಬೊಳ್ಳಾರ್ ಅವರನ್ನು ಸನ್ಮಾನಸಲಾಯಿತು. ಬ್ಲಾಕ್ ಪಂಚಾಯತಿ ಸದಸ್ಯ ಕೆ.ವಿ ರಾಧಾಕೃಷ್ಣ ಭಟ್, ಪಂಚಾಯತಿ ಸದಸ್ಯೆ ಸರಸ್ವತಿ ಎಲಿಯಾಣ ಹಾಗೂ ಉದ್ಯಮಿ ಮೋಹನ್ ಶೆಟ್ಟಿ ಮಾಜ್ಜಾರ್ ಶುಭ ಹಾರೈಸಿದರು. ವಸಂತ ಭಟ್ ತೊಟ್ಟೆತ್ತೋಡಿ, ದೇವದಾಸ್ ದೇರಂಬಳ ಉಪಸ್ಥಿತರಿದ್ದರು. ಮಂದಿರದ ಗೌರವಾಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ಲಕ್ಷ್ಮೀಶ ಬೊಳುಂಬು ವಂದಿಸಿದರು. ರವಿರಾಜ್ ಭಂಡಾರಿ ಕಾರ್ಯಕ್ರಮವನ್ನು ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries