ಬದಿಯಡ್ಕ: ತನ್ನ ಜೀವನದ ಅದೆಷ್ಟೋ ಕಷ್ಟಗಳನ್ನು ಮರೆತು ಧಾರ್ಮಿಕ ಕೇಂದ್ರಗಳ ಸುಸ್ಥಿತಿಯನ್ನು ಬಯಸುವ ಭಕ್ತಾದಿಗಳ ಪ್ರಯತ್ನದ ಫಲವಾಗಿ ಅದೆಷ್ಟೋ ದೇವಸ್ಥಾನಗಳು ಇಂದು ಜೀರ್ಣೋದ್ಧಾರಗೊಂಡು ವೈಭÀವದಿಂದ ಕಂಗೊಳಿಸುತ್ತಿವೆ. ಪೂರ್ಣಪ್ರಮಾಣದ ಸಮರ್ಪಣಾ ಮನೋಭಾವದಿಂದ ದೇವರನ್ನು ನಂಬಿ ಬದುಕುವವರನ್ನು ದೇವರು ಪೊರೆಯುತ್ತಾನೆ. ದಾನ ಧರ್ಮಗಳು, ಉತ್ತಮ ಕಾರ್ಯಗಳಿಗೆ ಸಂಪತ್ತನ್ನು ವಿನಿಯೋಗಿಸಿದಾಗ ದೇವತಾನುಗ್ರಹ ಲಭಿಸಲು ಸಾಧ್ಯ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಜೀರ್ಣೋದ್ಧಾರ ಸಮಿತಿ ಮತ್ತು ಸೇವಾಸಮಿತಿಯ ನೇತೃತ್ವದಲ್ಲಿ ಸೋಮವಾರ ಶ್ರೀಕ್ಷೇತ್ರದ ಸಭಾ ಭವನದಲ್ಲಿ ಜರಗಿದ ವಿಜ್ಞಾಪನಾ ಪತ್ರ ಹಾಗೂ ಜೀರ್ಣೋದ್ಧಾರ ನಿಧಿ ಕೂಪನ್ ಬಿಡುಗಡೆ ಹಾಗೂ ನಿಧಿಸಮರ್ಪಣೆ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನವನ್ನು ನೀಡಿದರು.
ಭೋಗಜೀವನಕ್ಕೆ ಮರುಳಾಗದೆ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ನಮ್ಮ ಸಂಪತ್ತು ವಿನಿಯೋಗವಾಗಬೇಕು ಎಂದರು. ಶ್ರೀ ಉದನೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಪೈ ಬದಿಯಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಶ್ರೀಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಮಾತನಾಡಿ, ಗುರುದೇವತಾನುಗ್ರಹವಿದ್ದರೆ ಮಾತ್ರ ಯಾವುದೇ ಕಾರ್ಯವು ಸಫಲತೆಯನ್ನು ಕಾಣಲು ಸಾಧ್ಯವಿದೆ. ಜೀವನದಲ್ಲಿ ಮಾಡಿದ ಪಾಪದ ಪರಿಹಾರಕ್ಕೆ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಸಾಧ್ಯವಿದೆ. ನಮ್ಮೊಳಗಿರುವ ವಿಕಾರಗಳು ದೂರವಾಗಿ ರಾಜಕೀಯ ಚಿಂತನೆಗಳನ್ನು ಬದಿಗಿಟ್ಟು ನಾವೆಲ್ಲಾ ಒಂದೇ ಎಂಬ ಭಾವನೆ ನಮ್ಮಲ್ಲಿ ಜಾಗೃತಗೊಳ್ಳಬೇಕು. ನಮ್ಮ ಅನಾಸ್ಥೆಯಿಂದ ದೇವಾಲಯಗಳು ಪಾಳು ಬೀಳಬಾರದು ಎಂದರು.
ಮುಂಡಪ್ಪಳ್ಳ ದರ್ಬಾರ್ ಕಟ್ಟೆ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಜೀರ್ಣೋದ್ಧಾರ ನಿಧಿ ಕೂಪನ್ ಬಿಡುಗಡೆಗೊಳಿಸಿದರು. ವಕೀಲ ಐ. ಸುಬ್ಬಯ್ಯ ರೈ ವಿಜ್ಞಾಪನಾಪತ್ರ ಬಿಡುಗಡೆಗೊಳಿಸಿದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಐ.ವಿ.ಭಟ್ ಕಾಸರಗೋಡು, ಕರ್ನಾಟಕ ಬ್ಯಾಂಕ್ ಮುಖ್ಯ ಪ್ರಬಂಧಕ ಶ್ರೀರಾಂಪ್ರಸಾದ್, ಶ್ರೀಕ್ಷೇತ್ರ ಧ.ಗ್ರಾ.ಯೋ ಕಾಸರಗೋಡು ಯೋಜನಾಧಿಕಾರಿ ಮುಖೇಶ್ ಮಾತನಾಡಿದರು. ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತ ಬಾರಡ್ಕ, ಶ್ರೀ ಉದನೇಶ್ವರ ಸೇವಾಸಮಿತಿಯ ಅಧ್ಯಕ್ಷ ಜಯದೇವ ಖಂಡಿಗೆ, ಧಾರ್ಮಿಕ ಮುಂದಾಳು ಯೋಗೀಶ್ ಕಡಮಣ್ಣಾಯ, ಚಂದ್ರಹಾಸ ರೈ ಪೆರಡಾಲಗುತ್ತು, ಕೊಡ್ಯಮೆ ಅರಮನೆಯ ಕೃಷ್ಣರಾಜ್ ಬಲ್ಲಾಳ್, ರವಿಕುಮಾರ್ ರೈ, ಅಶ್ವಿನಿ ಎಂ, ಶ್ಯಾಮಪ್ರಸಾದ್ ಮಾನ್ಯ, ಡಾ. ಶ್ರೀನಿಧಿ ಸರಳಾಯ, ವಸಂತಿ ಟೀಚರ್ ಅಗಲ್ಪಾಡಿ, ಹರಿನಾರಾಯಣ ಮಾಸ್ತರ್, ನಿತ್ಯಾನಂದ ಶೆಣೈ ಬದಿಯಡ್ಕ, ತಿರುಪತಿಕುಮಾರ್ ಭಟ್, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಸೂರ್ಯನಾರಾಯಣ ಬಿ., ಪ್ರೊ.ಎ.ಶ್ರೀನಾಥ್ ಕೊಲ್ಲಂಗಾನ, ಕೃಷ್ಣ ಬದಿಯಡ್ಕ, ಜಗದೀಶ ಪೆರಡಾಲ, ವಿಷ್ಣುಶರ್ಮ ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರ ವಕೀಲ ವೆಂಕಟ್ರಮಣ ಭಟ್ ಚಂಬಲ್ತಿಮಾರು ಸ್ವಾಗತಿಸಿ, ಉದನೇಶ್ವರ ಸೇವಾಸಮಿತಿಯ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಜಿ. ಜಗನ್ನಾಥ ರೈ ವಂದಿಸಿದರು. ಜೀರ್ಣೋದ್ಧಾರ ಸಮಿತಿಯ ಲೆಕ್ಕಪರಿಶೋಧಕ ಡಾ.ಶ್ರೀಶಕುಮಾರ್ ಪಂಜಿತ್ತಡ್ಕ ನಿರೂಪಿಸಿದರು. ಶ್ರೀಕ್ಷೇತ್ರದಲ್ಲಿ ಇದೇ ಸಂದಭರ್Àದಲ್ಲಿ ಲೋಕಕಲ್ಯಾಣಾರ್ಥವಾಗಿ ಶತರುದ್ರಾಭಿಷೇಕ, ಸಾಮೂಹಿಕ ಸತ್ಯನಾರಾಯಣ ಪೂಜೆ, ಬಲಿವಾಡುಕೂಟ, ಸಾಮೂಹಿಕ ಪ್ರಾರ್ಥನೆ ನಡೆಯಿತು. ಊರಪರವೂರ ಭಕ್ತಾದಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.




.jpg)
