HEALTH TIPS

ಪಯಸ್ವಿನಿ ಹೊಳೆದಡದಲ್ಲಿ ಪುರಾತನ ಶಿಲಾ ವಿಗ್ರಹ ಪತ್ತೆ

                   ಕಾಸರಗೋಡು: ಪಯಸ್ವಿನಿ ಹೊಳೆ ದಡ ಅಡ್ಕತ್ತೊಟ್ಟಿ ಎಂಬಲ್ಲಿ ಪುರಾತನ ಶಿಲಾ ವಿಗ್ರಹವೊಂದು ಪತ್ತೆಯಾಗಿದೆ. ನೆಲ್ಲಿತಟ್ಟು ಕ್ಷೇತ್ರ ಪರಿಸರ ಪೂಜೆಗಾಗಿ ಆಗಮಿಸಿದ್ದ ತಂತ್ರಿವರ್ಯ ನಿಲಮನ ರಂಜಿತ್ ನರಸಿಂಹಬಾಬು ನಂಬೂದಿರಿ ಅವರಿಗೆ ವಿಗ್ರಹವನ್ನು ಮೊದಲು ಕಂಡುಬಂದಿದ್ದು, ಈ ಬಗ್ಗೆ ಪ್ರಾಚ್ಯವಸ್ತು ಇಲಾಖೆಗೆ ಹಾಗೂ ಇತಿಹಾಸ ಸಂಶೋಧಕರಿಗೆ ಮಾಹಿತಿ ನೀಡಿದ್ದರು. 

            ಇತಿಹಾಸ ಸಂಶೋಧಕರಾದ ಅಜಿತ್ ಕುಮಾರ್, ಡಾ. ನಂದಕುಮಾರ್ ಕೋರೋತ್, ಡಾ. ಕೆ. ಪ್ರಕಾಶ್ ಕುಮಾರ್, ಸಿ.ಪಿ ರಾಜೀವನ್ ವಿಗ್ರಹ ಪರಿಶೀಲನೆ ನಡೆಸಿದ್ದಾರೆ. ಮುತ್ತಿನ ಹಾರ, ರತ್ನಕಮಂಡಲ ಕೆತ್ತನೆ ಹೊಂದಿರುವ ಈ ವಿಗ್ರಹ ಹತ್ತನೇ ಶತಮಾನದ್ದೆಂದು ಅಂದಾಜಿಸಲಾಗಿದೆ. ವಿಗ್ರಹ ವೀಕ್ಷಣೆಗೆ ಆಸುಪಾಸಿನ ಜನತೆ ಬಂದು ಸೇರುತ್ತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries