ಬದಿಯಡ್ಕ: ಕುಲಾಲ ಸುಧಾರಕ ಸಂಘ ಕುಂಬ್ದಾಜೆ ಶಾಖೆಯ ವಾರ್ಷಿಕೋತ್ಸವವು ನೇರಪ್ಪಾಡಿ ಶೇಷಮೋಹನರ ಮನೆಯಲ್ಲಿ ಜರಗಿತು.
ಕುಲಾಲ ಸುಧಾರಕ ಸಂಘ ಕುಂಬ್ದಾಜೆ ಶಾಖೆಯ ಅಧ್ಯಕ್ಷ ಮಹೇಶ್ ಅಜ್ಜಿ ಮೂಲೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯೆ ಜಯಂತಿ ವಿ., ಕಾಸರಗೋಡು ಜಿಲ್ಲಾ ಕುಲಾಲ ಸುಧಾರಕ ಸಂಘದ ಸಂಘಟನಾ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನ ಹಿತ್ತಿಲು ಮತ್ತು ಎಸೋಸಿಯೇಟ್ ಪೆÇ್ರಫೆಸರ್ ಅಂಡ್ ಹೆಡ್ ರಿಸರ್ಚ್ ಡಿಪಾರ್ಟ್ಮೆಂಟ್ ಆಫ್ ಫಿಸಿಕ್ಸ್ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್ ಮಂಗಳೂರು, ವಕೀಲ ರಾಜೇಶ್ ಕೊಚ್ಚಿ ಭಾಗವಹಿಸಿದ್ದರು. ಕುಲಾಲ ಸುಧಾರಕ ಸಂಘ ಕುಂಬ್ದಾಜೆ ಶಾಖೆಯ ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ನೇರಪ್ಪಾಡಿ ಮತ್ತು ಹಿರಿಯರಾದ ಧೂಮಪ್ಪ ಮಾಸ್ತರ್ ನೇರಪ್ಪಾಡಿ ಉಪಸ್ಥಿತರಿದ್ದರು. ಸಮಾಜದ ಬಂಧುಗಳಿಗೆ ಏರ್ಪಡಿಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು. ಕುಲಾಲ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಮಹೇಶ್ ಅಜ್ಜಿಮೂಲೆ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಚಿತ್ರ ಕಟ್ಟದಮೂಲೆ ಅವರನ್ನು ಒಳಗೊಂಡ ಸಮಿತಿಯನ್ನು ಆರಿಸಲಾಯಿತು. ಸತೀಶ್ ವೈ ಸ್ವಾಗತಿಸಿ, ರಾಜೇಶ್ ಅಜ್ಜಿ ಮೂಲೆ ವಂದಿಸಿದರು.





