ನವದೆಹಲಿ : ದೇಶದಲ್ಲಿ ಖಾಸಗಿ ವಿಮಾನಯಾನ ಕಂಪನಿಗಳು ಸೇವೆ ಆರಂಭಿಸಿ ಸರಿಸುಮಾರು ಮೂರು ದಶಕಗಳು ಕಳೆದಿದ್ದು, ಇದುವರೆಗೆ ಒಟ್ಟು 27 ಕಂಪನಿಗಳು ಬಾಗಿಲು ಮುಚ್ಚಿವೆ ಅಥವಾ ಬೇರೆ ಕಂಪನಿಗಳೊಂದಿಗೆ ವಿಲೀನಗೊಂಡಿವೆ.
0
samarasasudhi
ಮೇ 03, 2023
ನವದೆಹಲಿ : ದೇಶದಲ್ಲಿ ಖಾಸಗಿ ವಿಮಾನಯಾನ ಕಂಪನಿಗಳು ಸೇವೆ ಆರಂಭಿಸಿ ಸರಿಸುಮಾರು ಮೂರು ದಶಕಗಳು ಕಳೆದಿದ್ದು, ಇದುವರೆಗೆ ಒಟ್ಟು 27 ಕಂಪನಿಗಳು ಬಾಗಿಲು ಮುಚ್ಚಿವೆ ಅಥವಾ ಬೇರೆ ಕಂಪನಿಗಳೊಂದಿಗೆ ವಿಲೀನಗೊಂಡಿವೆ.
ಈಗ ವಾಡಿಯಾ ಸಮೂಹದ 'ಗೋ ಫಸ್ಟ್' ವಿಮಾನಯಾನ ಕಂಪನಿಯು 'ನಮ್ಮಿಂದ ಹಣಕಾಸಿನ ಹೊಣೆ ನಿಭಾಯಿಸಲು ಆಗುತ್ತಿಲ್ಲ' ಎಂದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಬಾಗಿಲು ತಟ್ಟಿದೆ.
ದೇಶದಲ್ಲಿ ಬಾಗಿಲು ಮುಚ್ಚಿದ ಮೊದಲ ಖಾಸಗಿ ವಿಮಾನಯಾನ ಕಂಪನಿ 'ಈಸ್ಟ್‌ವೆಸ್ಟ್ ಟ್ರಾವೆಲ್ಸ್ ಆಯಂಡ್ ಟ್ರೇಡ್ ಲಿಂಕ್ ಲಿಮಿಟೆಡ್' ಕಾರ್ಯಾಚರಣೆ ಆರಂಭಿಸಿದ ಎರಡು ವರ್ಷಗಳಲ್ಲಿ ಸ್ಥಗಿತಗೊಂಡಿತು. ಅದೇ ವರ್ಷದಲ್ಲಿ (1996) 'ಮೋದಿ ಲುಫ್ತ್ ಲಿಮಿಟೆಡ್' ಕೂಡ ಬಾಗಿಲುಮುಚ್ಚಿತು. ದೇಶದಲ್ಲಿ ಖಾಸಗಿ ವಿಮಾನಯಾನ ಕಂಪನಿಗಳು ಸೇವೆ ಆರಂಭಿಸಿದ್ದು 1994ರಲ್ಲಿ.
ಕಿಂಗ್‌ಫಿಷರ್ ಏರ್‌ಲೈನ್ಸ್ ಕಂಪನಿಯು 2008ರಲ್ಲಿ ಡೆಕ್ಕನ್ ಏವಿಯೇಷನ್ ಪ್ರೈ.ಲಿ. ಕಂಪನಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿತ್ತು.
ಬಾಗಿಲು ಮುಚ್ಚಿದ ಪ್ರಮುಖ ಕಂಪನಿಗಳು:
2020: ಜೆಕ್ಸಸ್ ಏರ್ ಸರ್ವಿಸಸ್ ಪ್ರೈ.ಲಿ., ಡೆಕ್ಕನ್ ಚಾರ್ಟರ್ಡ್ ಪ್ರೈ.ಲಿ., ಏರ್ ಒಡಿಶಾ ಏವಿಯೇಷನ್ ಪ್ರೈ.ಲಿ.
2022: ಹೆರಿಟೇಜ್ ಏವಿಯೇಷನ್ ಪ್ರೈ.ಲಿ.
2019: ಜೆಟ್ ಏರ್‌ವೇಸ್, ಜೆಟ್ ಲೈಟ್
2017: ಏರ್ ಕಾರ್ನಿವಲ್ ಪ್ರೈ.ಲಿ., ಏರ್ ಪೆಗಾಸಸ್ ಪ್ರೈ.ಲಿ, ರೆಲಿಗೇರ್ ಏವಿಯೇಷನ್ ಲಿ., ಏರ್ ಕೊಸ್ಟಾ, ಕ್ವಿಕ್‌ಜೆಟ್ ಕಾರ್ಗೊ ಪ್ರೈ.ಲಿ.
2012: ಕಿಂಗ್‌ಫಿಷರ್ ಏರ್‌ಲೈನ್ಸ್ ಲಿ.