HEALTH TIPS

ಮೂವರು ಸಹೋದರಿಯರು ಸೇರಿ ಒಟ್ಟು ಏಳು ಮಂದಿ ಮಹಿಳೆಯರು ನೀರುಪಾಲು

              ಹೈದರಾಬಾದ್​: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಹುಡುಗಿಯರು ಮತ್ತು ಮಹಿಳೆಯೊಬ್ಬರು ನೀರುಪಾಲಾಗಿರುವ ದಾರುಣ ಘಟನೆ ತೆಲಂಗಾಣದ ಪಲಮಾರು ಜಿಲ್ಲೆಯಲ್ಲಿ ನಿನ್ನೆ (ಮೇ 8) ನಡೆದಿದೆ.

                    ಮೃತರಲ್ಲಿ ಮೂವರು ಸಹೋದರಿಯರು. ಬಟ್ಟೆ ತೊಳೆಯಲೆಂದು ಮೂವರು ವಾನಪರ್ತಿ ಜಿಲ್ಲೆಯಲ್ಲಿರುವ ಕೆರೆಯೊಂದಕ್ಕೆ ತೆರಳಿದ್ದರು.

                 ಈ ವೇಳೆ ಕಿರಿಯ ಸಹೋದರಿ ಆಕಸ್ಮಿಕವಾಗಿ ಕೆರೆಗೆ ಬಿದ್ದು, ನೀರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದಳು. ಆಕೆಯನ್ನು ನೋಡಿ ಕಾಪಾಡಲೆಂದು ಇಬ್ಬರು ಸಹೋದರಿಯರು ಕೆರೆ ಧುಮುಕಿದ್ದು, ಈಜು ಬರದ ಕಾರಣ ಮೂವರು ನೀರು ಪಾಲಾಗಿದ್ದಾರೆ.

            ಮೃತರನ್ನು ತಿರುಪತಮ್ಮ (16), ಸಂಧ್ಯಾ (12) ಮತ್ತು ದೀಪಿಕಾ (10) ಎಂದು ಗುರುತಿಸಲಾಗಿದೆ. ಮೂವರು ಕೂಡ ಶ್ರೀರಂಗಪುರಂ ಮಂಡಲದ ತಾಪಿಪಮು ಮೂಲದವರು. ಮೂವರು ವೀರಸಮುದ್ರಂ ಗ್ರಾಮದಲ್ಲಿರುವ ಕೆರೆಗೆ ಬಟ್ಟೆ ತೊಳೆಯಲೆಂದು ಹೋಗಿದ್ದಾಗ ಕಿರಿಯ ಸಹೋದರಿ ದೀಪಿಕಾ ಆಕಸ್ಮಿಕವಾಗಿ ಕೆರೆ ಬಿದ್ದಿದ್ದಾಳೆ. ಆಕೆಯನ್ನು ಕಾಪಾಡಲು ಇನ್ನಿಬ್ಬರು ಸಹೋದರಿಯರು ಕೆರೆಗೆ ಧುಮುಕಿದಾಗ ದುರ್ಘಟನೆ ಸಂಭವಿಸಿದೆ.

                                    ಮದುವೆಗೆಂದು ಹೋಗಿ ಮಸಣ ಸೇರಿದರು

              ಮತ್ತೊಂದು ಘಟನೆಯಲ್ಲಿ ಮದುವೆಗೆ ಬಂದಿದ್ದ ಮೂವರು ಬಾಲಕಿಯರು ನಾರಾಯಣಪೇಟೆಯ ಕೊಯಿಲಸಾಗರ ತೊರೆಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾರೆ. ಕಾಲ್​ ಮಂಡಲದ ರಾಕೊಂಡ ಗ್ರಾಮದ ಭಾಗ್ಯಮ್ಮ ಮತ್ತು ಅಶೋಕ್ ದಂಪತಿಗೆ ಐವರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳು ಮದುವೆ ಹೈದರಾಬಾದ್‌ ಮೂಲದ ಹುಡುಗನೊಂದಿಗೆ ನಿಶ್ಚಿಯವಾಗಿತ್ತು. ಹೀಗಾಗಿ ಸೋಮವಾರ ರಾಚಕೊಂಡ ತಲುಪಿದ್ದರು.

                ವಧುವಿನ ಸಹೋದರಿ ರಾಧಿಕಾ (16) ಮತ್ತು ಆಕೆಯ ಸಂಬಂಧಿಕರಾದ ನರ್ವಮಂಡಲ ಪಾತಾಚಾಡೆ ಮೂಲದ ಸುವರ್ಣ ಹಾಗೂ ಗಣೇಶ್ ದಂಪತಿ ಪುತ್ರಿಯರಾದ ಶ್ರಾವಣಿ (15), ಮಹೇಶ್ವರಿ (14) ಮತ್ತು ಇತರ ಇಬ್ಬರು ಹೆಣ್ಣುಮಕ್ಕಳಾದ ಶಶಿಕಲಾ ಮತ್ತು ಚಂದ್ರಕಲಾ ಅವರು ಕೊಯಿಲಸಾಗರ್ ಊಕಚೆಟ್ಟು ನದಿಗೆ ಈಜಲು ಹೋಗಿದ್ದರು. ಮರಳಿಗಾಗಿ ತೋಡಿದ ಗುಂಡಿ ಆಳವಾಗಿದ್ದರಿಂದ ರಾಧಿಕಾ, ಶ್ರಾವಣಿ ಹಾಗೂ ಮಹೇಶ್ವರಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಅವರನ್ನು ರಕ್ಷಿಸುವ ಯತ್ನದಲ್ಲಿ ಶಶಿಕಲಾ ಕೂಡ ನೀರಿಗೆ ಧುಮುಕಿದಳು. ಆದರೆ, ತಕ್ಷಣ ಎಚ್ಚೆತ್ತುಕೊಂಡು ಪ್ರಾಣ ಉಳಿಸಿಕೊಂಡಿದ್ದಾಳೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಾರಾಯಣಪೇಟೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

                                           ಈಜು ಕಲಿಸಲು ಹೋಗಿ ನೀರುಪಾಲು

             ನಾಗರಕರ್ನೂಲ್ ಜಿಲ್ಲೆ ಕೊಡೇರು ಮಂಡಲದ ಬಾವಾಯಿಪಲ್ಲಿ ಮೂಲದ ತೆಲುಗು ಲಿಂಗಮ್ಮ (30) ಎಂಬುವರು ತನ್ನ ಪತಿ ಲಿಂಗಸ್ವಾಮಿಯೊಂದಿಗೆ ಮಕ್ಕಳಿಗೆ ಈಜು ಕಲಿಸಲು ಕೃಷಿ ಬಾವಿಗೆ ಇಳಿದಿದ್ದಳು. ಆದರೆ ಈಜು ಸರಿಯಾಗಿ ಬಾರದೆ ಬಾವಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ. ಪತಿ ಹಾಗೂ ಸುತ್ತಮುತ್ತಲಿನವರು ಎಷ್ಟೇ ಹುಡುಕಾಡಿದರೂ ಪತ್ತೆಯಾಗದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಶವ ಹುಡುಕಿ ಹೊರತೆಗೆದಿದ್ದಾರೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries