HEALTH TIPS

ಸಾಲ ಮರುಪಾವತಿ ಹೆಸರಲ್ಲಿ ಕುಟುಂಬಕ್ಕೆ ಕಿರುಕುಳ-ಪ್ರಬಲ ಹೊರಟಕ್ಕೆ ಮುಂದಾದ ಸಂಘಟನೆ

  


                          

               ಕಾಸರಗೋಡು : ನಗರದ ಬ್ಯಾಂಕ್ ಒಂದರಿಂದ ಮನೆ ನಿರ್ಮಾಣಕ್ಕಾಗಿ ಪಡೆದ ಸಾಲ ಮರುಪಾವತಿಸಲಿರು ಕಾಲಾವಧಿ ಪೂರ್ಣಗೊಳ್ಳುವ ಮೊದಲೇ ಬ್ಯಾಂಕ್ ಅಧಿಕಾರಿಗಳು ಮನೆಯಲ್ಲಿದ್ದವರನ್ನು ಹೊರಗೆ ಕಳುಹಿಸಿ ಮನೆಗೆ ಬೀಗ ಜಡಿದ ಪರಿಣಾಮ ದಂಪತಿ ತಮ್ಮ ಮೂವರು ಮಕ್ಕಳ ಜತೆ ಬಿದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. 

        ಈ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲು ಬ್ಯಾಂಕ್ ಅಧಿಕಾರಿಗಳು ಮುಂದಾಗುವಂತೆ ಆಲ್ ಇಂದಿಯಾ ಕಾನ್‍ಫೆಡರೇಶನ್ ಆಫ್ ಎಸ್‍ಸಿ-ಎಸ್‍ಟಿ ಆರ್ಗನೈಸೇಶನ್ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಐ. ಲಕ್ಷ್ಮಣ ಪೆರಿಯಡ್ಕ ಸುದ್ದಿಗೋಷ್ಠೀಯಲ್ಲಿ ಆಗ್ರಹಿಸಿದ್ದಾರೆ. 

             ಬೆದ್ರಡ್ಕ ಕಂಬಾರ್ ನಿವಾಸಿ ಶೀನ ಎಂಬವರು 2019 ಜೂನ್ ತಿಂಗಲಲ್ಲಿ ಕಾಸರಗೋಡು ಕೋಆಪರೇಟಿವ್ ಟೌನ್ ಬ್ಯಾಂಕ್‍ನ ಕಾಸರಗೋಡು ಬ್ಯಾಂಕ್ ರೋಡ್ ಶಾಖೆಯಿಂದ 10 ವರ್ಷಗಳ ಕಾಲಾರ್ವಧಿಯಲ್ಲಿ ಮೂರು ಲಕ್ಷ ರೂ. ವಸತಿ ಸಾಲ ಪಡೆದುಕೊಂಡಿದ್ದಾರೆ.  ಮನೆ ಒಕ್ಕಲು ನಡೆದು ನಾಲ್ಕು ತಿಂಗಳು ಮಾತ್ರ ಕಳೆದಿರುವುದಲ್ಲದೆ, ಸಾಲ ಪಡೆದು 4 ವರ್ಷ ಪೂರ್ತಿಗೊಳ್ಳುವ ಮೊದಲೇ ಪ್ರಸಕ್ತ ಮನೆಯನ್ನು ಸಾಲ ಮರುಪಾವತಿ ಹೆಸರಲ್ಲಿ ವಶಪಡಿಸಿಕೊಂಡು ಸೀಲ್ ಮಾಡಲಾಗಿದೆ. ಪರಿಶಿಷ್ಟ ಜಾತಿ ಮೊಗೇರ ವರ್ಗಕ್ಕೆ ಸೇರಿದ ಶೀನ, ಅವರ ಪತ್ನಿ ಹಾಗೂ ಮೂವರು ಮಕ್ಕಳು ಮನೆಯಿಂದ ಹೊರಬೀಳಬೇಕಾದ ಪರಿಸ್ಥಿತಿಯಿದೆ. ಶೀನ ಅವರು ಕೂಲಿ ಕೆಲಸ ಮಾಡಿ ಜಿವನ ಸಅಗಿಸುತ್ತಿದ್ದು, ಕರೊನಾ ಕಾಲಘಟ್ಟದಲ್ಲಿ ಕರೊನಾ ಬಾಧಿಸಿ ಕುಟುಂಬದವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ಸಂದರ್ಭ ಸಾಲ ಪಾವತಿಯಲ್ಲಿ ಒಂದಷ್ಟು ವಿಳಂಬವುಂಟಾಗಿತ್ತು. ಮೊರಟೋರಿಯಂ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ. ಬ್ಯಾಂಕ್ ಅಧಿಕಾರಿಗಳು ಸಾಲಮರುಪಾವತಿ ಹೆಸರಲ್ಲಿ ಕಿರುಕುಳ ನೀಡುತ್ತಿರುವುದು ಖಂಡನೀಯ. ಶೀನ ಮತ್ತು ಕುಟುಂಬದವರು ಮನೆಯಿದ್ದರೂ, ಅನಾಥರಾಗಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬ್ಯಾಂಕ್ ಅದಿಕಾರಿಗಳು ತಕ್ಷಣ ಪರಿಹಾರ ಕಲ್ಪಿಸದಿದ್ದಲ್ಲಿ ಪ್ರಬಲ ಹೋರಾಟಕ್ಕೆ ಸಂಘಟನೆ ಮುಂದಾಗಲಿರುವುದಾಗಿ ತಿಳಿಸಿದ್ದಾರೆ. 

                  ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಕೃಷ್ಣನ್, ಜಿಲ್ಲಾ ಕಾರ್ಯದಶಿ ಪೊನ್ನಪ್ಪನ್, ಉಪಾಧ್ಯಕ್ಷ ಸಂಜೀವ ಪುಳಿಕ್ಕೂರ್, ಶೀನ ಹಾಗೂ ಅವರ ಪತ್ನಿ, ಮಕ್ಕಳು ಉಪಸ್ಥಿತರಿದ್ದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries