HEALTH TIPS

ಇನ್ನು ಮುಂದೆ ವಾಟ್ಸ್‌ಆಯಪ್‌ ಸಂದೇಶಗಳನ್ನು 'ಎಡಿಟ್‌' ಮಾಡಲು ಸಿಗಲಿದೆ ಅವಕಾಶ: ಆದರೆ...

                ಬೆಂಗಳೂರು: ವಾಟ್ಸ್‌ಆಯಪ್‌ ಬಳಕೆದಾರರು ಇನ್ನು ಮುಂದೆ ತಾವು ಕಳುಹಿಸಿದ ಸಂದೇಶಗಳನ್ನು 'ಎಡಿಟ್‌' (ತಿದ್ದುವಿಕೆ) ಮಾಡಬಹುದು. ಈ ವಿಷಯವನ್ನು ವಾಟ್ಸ್‌ಆಯಪ್‌ ಸೋಮವಾರ ಘೋಷಿಸಿದೆ.

                'ಕಾಗುಣಿತ ತಪ್ಪು ಸರಿಪಡಿಸುವುದರಿಂದ ಹಿಡಿದು, ಸಂದೇಶಕ್ಕೆ ಹೆಚ್ಚುವರಿಯಾಗಿ ಮತ್ತಷ್ಟು ವಿಷಯ ಸೇರಿಸುವವರೆಗೆ ನಿಮ್ಮ ಚಾಟ್‌ಗಳ ಮೇಲೆ ನಿಮಗೆ ಹೆಚ್ಚಿನ ನಿಯಂತ್ರಣ ನೀಡಲು ನಾವು ಉತ್ಸುಕರಾಗಿದ್ದೇವೆ.

              ನೀವು ಮಾಡಬೇಕಾಗಿರುವುದು ಇಷ್ಟೇ. ಕಳುಹಿಸಿದ ಸಂದೇಶವನ್ನು ಲಾಂಗ್‌ಪ್ರೆಸ್‌ ಮಾಡಿದರೆ, ಅಲ್ಲಿ ನಿಮಗೆ 'ಎಡಿಟ್‌' ಆಯ್ಕೆ ಕಾಣುತ್ತದೆ. 'ಎಡಿಟ್‌' ಮೇಲೆ ಟ್ಯಾಪ್‌ ಮಾಡಿ ನೀವು ನಿಮ್ಮ ಸಂದೇಶವನ್ನು ತಿದ್ದಬಹುದು. ಆದರೆ, ಸಂದೇಶ ಕಳುಹಿಸಿದ 15 ನಿಮಿಷಗಳ ವರೆಗೆ ಮಾತ್ರ ನಿಮಗೆ ಈ ಅವಕಾಶ ಇರಲಿದೆ' ಎಂದು ವಾಟ್ಸ್‌ಆಯಪ್‌ ತಿಳಿಸಿದೆ.

                 ತಿದ್ದಲಾದ ಸಂದೇಶಗಳ ಪಕ್ಕದಲ್ಲೇ 'ಎಡಿಟೆಡ್‌' ಎಂದು ತೋರಿಸುತ್ತಿರುತ್ತದೆ. ಹೀಗಾಗಿ ಸಂದೇಶ ಸ್ವೀಕರಿಸಿದವರಿಗೆ ಇದು ತಿದ್ದುಪಡಿಯಾದ ಸಂದೇಶ ಎಂಬುದು ಗೊತ್ತಾಗುತ್ತದೆ. ಆದರೆ, 'ಎಡಿಟ್‌ ಹಿಸ್ಟ್ರಿ' ಗೊತ್ತಾಗುವುದಿಲ್ಲ ಎಂದು ಮೆಸೆಜಿಂಗ್‌ ಆಯಪ್‌ ತಿಳಿಸಿದೆ.

               ಈ ವಿಶೇಷತೆ ಜಾಗತಿಕವಾಗಿ ಮುಂಬರುವ ವಾರಗಳಲ್ಲಿ ಎಲ್ಲರಿಗೂ ಲಭ್ಯವಾಗಲಿದೆ ಎಂದು ವಾಟ್ಸ್‌ಆಯಪ್‌ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries