HEALTH TIPS

ಎಲತ್ತೂರ್ ರೈಲು ದಾಳಿ ಪ್ರಕರಣ: ಅಧಿಕಾರಿಗಳ ಅನುಪಸ್ಥಿತಿಯಲ್ಲಿ ವಕೀಲರೊಂದಿಗೆ ಮಾತನಾಡಲು ಶಾರುಖ್ ಸೈಫಿಯ ಕೋರಿಕೆಯನ್ನು ತಿರಸ್ಕರಿಸಿದ ನ್ಯಾಯಾಲಯ

              ಎರ್ನಾಕುಳಂ: ಎಲತ್ತೂರ್ ರೈಲು ದಾಳಿ ಪ್ರಕರಣದ ಆರೋಪಿಯ  ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಪ್ರಕರಣದ ಪ್ರಮುಖ ಆರೋಪಿ ಶಾರುಖ್ ಶನಿವಾರ ನ್ಯಾಯಾಲಯಕ್ಕೆ ಹಾಜರಾದಾಗ ಅಧಿಕಾರಿಯ ಉಪಸ್ಥಿತಿಯಿಲ್ಲದೆ ವಕೀಲರೊಂದಿಗೆ ಮಾತನಾಡಲು ಮನವಿ ಮಾಡಿದ್ದ. 

           ಇದನ್ನು ನ್ಯಾಯಾಲಯ ತಿರಸ್ಕರಿಸಿತ್ತು. ವಕೀಲರು ಜೈಲಿಗೆ ಹೋಗಿ ಆರೋಪಿಗಳೊಂದಿಗೆ ಕಾನೂನು ಪ್ರಕಾರ ಮಾತನಾಡಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

          ನ್ಯಾಯಾಲಯದಲ್ಲಿ ಶಾರುಖ್ ಸೈಫಿಯ  ಬೇಡಿಕೆಯನ್ನು ಎನ್.ಐ.ಎ ಬಲವಾಗಿ ವಿರೋಧಿಸಿತು. ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ವಕೀಲರ ಜೊತೆ ಮಾತನಾಡಿದ್ದನ್ನೂ ಕೋರ್ಟ್ ಗಮನಕ್ಕೆ ತಂದಿದೆ. ಶನಿವಾರ ಶಾರುಖ್ ನನ್ನು ಕೊಚ್ಚಿಯ ವಿಶೇಷ ಎನ್‍ಐಎ ನ್ಯಾಯಾಲಯಕ್ಕೆ ಆನ್‍ಲೈನ್‍ನಲ್ಲಿ ಹಾಜರುಪಡಿಲಾಗುವುದು.

           ಈ ಅಪರಾಧದಲ್ಲಿ ಭಯೋತ್ಪಾದಕರ ನಂಟು ಇದೆಯೇ, ಶಾರುಖ್ ಸೈಫೀಗೆ ಇನ್ನಷ್ಟು ಜನರ ನೆರವು ಸಿಕ್ಕಿದೆಯೇ ಎಂಬಿತ್ಯಾದಿ ಸೇರಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ತನಿಖೆ ಪ್ರಗತಿಯಲ್ಲಿದೆ. ಎನ್‍ಐಎ ಕೊಚ್ಚಿ ಘಟಕ ದಾಳಿಯ ಯೋಜನೆ ಮತ್ತು ಸಂಚಿನ ಕುರಿತು ತನಿಖೆ ನಡೆಸುತ್ತಿದೆ. ಆರೋಪಿ ಶಾರುಖ್ ಸೈಫಿ ವಿರುದ್ಧ ವಿಶೇಷ ತನಿಖಾ ತಂಡ ಯುಎಪಿಎ ವಿಧಿಸಿದ ಬಳಿಕ ಎನ್.ಐ.ಎ ತನಿಖೆಗೆ ಆರಂಭಿಸಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries