HEALTH TIPS

ದಿನಗಳವರೆಗೆ ನೋವು ಮತ್ತು ಊತ: 58 ವರ್ಷದ ಮಹಿಳೆಯ ಕಣ್ಣಿನಿಂದ ಜೀವಂತ ಹುಳು ಹೊರತೆಗೆದ ವೈದ್ಯರು

              ತಿರುವನಂತಪುರಂ: ಹಲವು ದಿನಗಳಿಂದ ನೋವು ಹಾಗೂ ಊತದಿಂದ ಬಳಲಿ ಆಸ್ಪತ್ರೆಗೆ ಬಂದಿದ್ದ 58 ವರ್ಷದ ಮಹಿಳೆಯೊಬ್ಬರ ಕಣ್ಣಿನಿಂದ ಜೀವಂತ ಹುಳು ತೆಗೆಯಲಾಗಿದೆ.

          ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿ ಮೂಲಕ 11 ಸೆ. ಮೀ ಉದ್ದದ ಹುಳುವನ್ನು ಹೊರತೆಗೆಯಲಾಗಿದೆ. ಅವರ ಕಣ್ಣು ಚಲಿಸುವ ಸ್ನಾಯುಗಳಲ್ಲಿ ಹುಳ ಕಂಡುಬಂದಿದೆ.

            ರೋಗಿಯ ಬಲಗಣ್ಣಿನಲ್ಲಿ ಹಲವಾರು ದಿನಗಳ ನೋವು ಮತ್ತು ಊತದ ನಂತರ, ಅವರÀನ್ನು ಪರೀಕ್ಷೆಗಾಗಿ ಇಎನ್ಟಿ ವಿಭಾಗಕ್ಕೆ ಉಲ್ಲೇಖಿಸಲಾಯಿತು. ಕಣ್ಣಿನ ಸುತ್ತ ಕೀವು ಸೇರಿಕೊಂಡಿರುವುದು ಗಮನಕ್ಕೆ ಬಂದ ನಂತರ ಅಲ್ಟ್ರಾಸೌಂಡ್ ಸ್ಕ್ಯಾನ್ ಕೂಡ ಮಾಡಲಾಗಿದೆ. ಇದರೊಂದಿಗೆ ಕಣ್ಣಿನೊಳಗೆ ಜೀವಂತ ಹುಳು ಇರುವುದು ಪತ್ತೆಯಾಗಿದೆ. ಎರಡು ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಹುಳುವನ್ನು ಹೊರತೆಗೆಯಲಾಯಿತು.

            ಸಾಕುಪ್ರಾಣಿಗಳಲ್ಲಿ ಕಂಡುಬರುವ ಡೈರೋಫಿಲೇರಿಯಾ ಎಂಬ ಹುಳು ರೋಗಿಯ ಕಣ್ಣಿನಲ್ಲಿ ಕಂಡುಬಂದಿದೆ. ಇವು ಸೊಳ್ಳೆಗಳ ಮೂಲಕ ಮಾನವ ದೇಹವನ್ನು ಸೇರುತ್ತವೆ. ಸಾಮಾನ್ಯವಾಗಿ ದೇಹದೊಳಗೆ ಪ್ರವೇಶಿಸಿದರೆ ಸಾಯುವ ಈ ಹುಳುಗಳು ಕಣ್ಣುಗಳ ಸುತ್ತಲಿನ ಚರ್ಮದ ಅಡಿಯಲ್ಲಿ ಜೀವಂತವಾಗಿರುವುದು ಅಪೂರ್ವ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries