HEALTH TIPS

ನೂತನ ಸಂಸತ್ ಭವನದಲ್ಲಿ ಬ್ರಿಟೀಷರಿಂದ ನೆಹರು ಪಡೆದ ರಾಜದಂಡ 'ಸೆಂಗೋಲ್' ಸ್ಥಾಪನೆ: ಶಾ

                 ವದೆಹಲಿ: ಬ್ರಿಟೀಷರಿಂದ ಅಧಿಕಾರ ಹಸ್ತಾಂತರವನ್ನು ಪ್ರತಿನಿಧಿಸಲು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸ್ವೀಕರಿಸಿದ್ದ ತಮಿಳುನಾಡಿನ ಐತಿಹಾಸಿಕ ರಾಜದಂಡವಾದ 'ಸೆಂಗೊಲ್' ಅನ್ನು ಅಲಹಾಬಾದ್‌ನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದ್ದು, ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ನೂತನ ಸಂಸತ್ ಭವನದಲ್ಲಿ ಅದನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.

                ಆಗ ಏಕೆ ನೀಡಲಾಯಿತು ಮತ್ತು ಈಗ ಏಕೆ ಸ್ಥಾಪಿಸಲಾಗುತ್ತಿದೆ ಎಂಬುದರ ಉದ್ದೇಶ ಸ್ಪಷ್ಟವಾಗಿದೆ ಎಂದು ಶಾ ಮಾರ್ಮಿಕವಾಗಿ ನುಡಿದಿದ್ದಾರೆ..

              ಅಧಿಕಾರ ಹಸ್ತಾಂತರವು ಕೇವಲ ಕೈಕುಲುಕುವುದು ಅಥವಾ ದಾಖಲೆಗಳಿಗೆ ಸಹಿ ಮಾಡುವುದು ಮಾತ್ರವಲ್ಲ. ಆಧುನಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಸಂಪ್ರದಾಯಗಳೊಂದಿಗೆ ಸಂಪರ್ಕ ಹೊಂದಿರಬೇಕು ಎಂದು ಅವರು ಹೇಳಿದರು.

'                  ಜವಾಹರಲಾಲ್ ನೆಹರು ಅವರು ಆಗಸ್ಟ್ 14, 1947ರಂದು ಅನುಭವಿಸಿದ ಅದೇ ಭಾವನೆಯನ್ನು ಸೆಂಗೋಲ್ ಪ್ರತಿನಿಧಿಸುತ್ತದೆ'ಎಂದು ಅವರು ಹೇಳಿದರು.

            ನೂತನ ಸಂಸತ್ ಕಟ್ಟಡವು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಉದಾಹರಣೆಯಾಗಿದೆ ಎಂದು ಗೃಹ ಸಚಿವರು ಹೇಳಿದರು.

                ಉದ್ಘಾಟನೆಯ ದಿನದಂದು 7,000 ಕಾರ್ಮಿಕರನ್ನು (ಶ್ರಮ ಯೋಗಿಗಳು) ಪ್ರಧಾನ ಮಂತ್ರಿ ಗೌರವಿಸಲಿದ್ದಾರೆ ಎಂದೂ ಅವರು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries