ಮಲಪ್ಪುರಂ: ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ತಾನೂರಿನ ದೋಣಿ ದುರಂತ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿದರು.
ಏತನ್ಮಧ್ಯೆ, ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರು ಅಪಘಾತ ಸ್ಥಳಕ್ಕೆ ಭೇಟಿ ನೀಡಿದರು. ಮುಖ್ಯಮಂತ್ರಿಗಳು ತಿರುರಂಗಡಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಮೃತರ ಅವಲಂಬಿತರಿಗೆ ರಾಜ್ಯ ಸರ್ಕಾರ 10 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದೆ. ಮುಖ್ಯಮಂತ್ರಿಗಳು ಅಪಘಾತ ಸ್ಥಳಕ್ಕೆ ಆಗಮಿಸಿ ಸಚಿವ ಸಂಪುಟದ ನಿರ್ಧಾರವನ್ನು ತಿಳಿಸಿದರು. ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನೂ ರಾಜ್ಯ ಸರ್ಕಾರವೇ ಭರಿಸಲಿದೆ. ರಾಜ್ಯವು ಅಪಘಾತವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು. ಘಟನೆಯ ಕುರಿತು ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿದ್ದು, ತನಿಖೆಗೆ ತಾಂತ್ರಿಕ ತಜ್ಞರ ತಂಡವಿರುತ್ತದೆ ಎಂದು ತಿಳಿಸಿದರು.
ಸಚಿವರಾದ ಆಂಟೋನಿ ರಾಜು, ಸಾಜಿ ಚೆರಿಯನ್, ಕೆ ರಾಧಾಕೃಷ್ಣನ್, ರೋಶಿ ಆಗಸ್ಟಿನ್, ಕೆ ಕೃಷ್ಣನ್‍ಕುಟ್ಟಿ, ಅಬ್ದು ರಹಿಮಾನ್, ಮೊಹಮ್ಮದ್ ರಿಯಾಜ್, ಅಹ್ಮದ್ ದೇವರಕೋವಿಲ್, ಪಿ ಪ್ರಸಾದ್ ಮತ್ತು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್ ಕೂಡ ಮುಖ್ಯಮಂತ್ರಿ ಜೊತೆಗಿದ್ದರು. ಅಪಘಾತದಲ್ಲಿ ಮೃತಪಟ್ಟ ಪರಪ್ಪನಂಗಡಿಯ ಕುಟುಂಬಸ್ಥರ ಪಾರ್ಥಿವ ಶರೀರವನ್ನು ಪುತ್ತನ್ ಕಡಪುರಂ ಮದ್ರಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಮುಖ್ಯಮಂತ್ರಿಗಳೂ ಇಲ್ಲಿಗೆ ಭೇಟಿ ನೀಡಿದ್ದರು. ಸಾರ್ವಜನಿಕ ವೀಕ್ಷಣೆ ಸಮಾರಂಭದಲ್ಲಿ ಸಚಿವರಾದ ಕೆ ರಾಧಾಕೃಷ್ಣನ್ ಮತ್ತು ರೋಶಿ ಅಗಸ್ಟಿನ್ ಸಹ ಭಾಗವಹಿಸಿದ್ದರು.





