HEALTH TIPS

ಸಿಂಗಪುರ: ದೇಗುಲದ ಆಭರಣ ಅಡವಿಟ್ಟಿದ್ದ ಭಾರತ ಮೂಲದ ಅರ್ಚಕನಿಗೆ ಆರು ವರ್ಷ ಸಜೆ

                ಸಿಂಗಪುರ: ದೇವಸ್ಥಾನದ ಆಭರಣಗಳನ್ನು ಪ್ರಧಾನ ಅರ್ಚಕರೇ ಸುಮಾರು ₹ 12.40 ಕೋಟಿಗೆ (1.5 ಮಿಲಿಯನ್ ಸಿಂಗಪುರ ಡಾಲರ್) ಅಡಮಾನ ಇಟ್ಟಿದ್ದ ಅಪರಾಧ ಸಾಬೀತಾಗಿದ್ದು, ಕೋರ್ಟ್ ಅಪರಾಧಿಗೆ ಆರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

              ಇಲ್ಲಿನ ಅತಿ ಹಳೆಯದಾದ ಹಿಂದೂ ದೇವಾಲಯ ಶ್ರೀ ಮಾರಿಯಮ್ಮಾನ್ ದೇವಸ್ಥಾನದ ಮುಖ್ಯ ಅರ್ಚಕರಾಗಿದ್ದ 39 ವರ್ಷದ ಕಂಡಸ್ವಾಮಿ ಸೇನಾಪತಿ ಶಿಕ್ಷೆಗೆ ಗುರಿಯಾದ ಅಪರಾಧಿ.

ಹಿಂದೂ ದತ್ತಿ ಮಂಡಳಿ ಈತನನ್ನು ಡಿಸೆಂಬರ್‌ 2013ರಲ್ಲಿ ನೇಮಿಸಿತ್ತು.

              ಮಾರ್ಚ್ 30, 2020ರಲ್ಲಿ ಈತ ರಾಜೀನಾಮೆ ನೀಡಿದ್ದ. ಕ್ರಿಮಿನಲ್‌ ವಂಚನೆ, ವಿಶ್ವಾಸದ್ರೋಹ, ದುರ್ಬಳಕೆಗೆ ಬಗ್ಗೆ ಎರಡು ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಇನ್ನು ಆರು ಪ್ರಕರಣವಿದ್ದು, ವಿಚಾರಣೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

                  ಅರ್ಚಕ ಭಾರತದ ಪ್ರಜೆ. ಕೋವಿಡ್‌ ಸಂದರ್ಭದಲ್ಲಿ ದೇಗುಲದ ಆಭರಣಗಳ ಲೆಕ್ಕಪರಿಶೋಧನೆ ನಡೆಯುವಾಗ ಕೆಲ ಆಭರಣಗಳು ನಾಪತ್ತೆಯಾಗಿದ್ದವು. ತನಿಖೆಯ ವೇಳೆಯಲ್ಲಿ ಈತನ ಕೃತ್ಯ ಬಯಲಾಗಿತ್ತು.

                 ದೇಗುಲದ ಆಭರಣಗಳನ್ನು ಈತ 2016ರಿಂದಲೇ ಅಡಮಾನ ಇಡಲು ಶುರು ಮಾಡಿದ್ದ. ಇತರೆ ಆಭರಣ ಅಡವಿಟ್ಟು, ಬಂದ ಹಣದಿಂದ ಈ ಮೊದಲು ಇಟ್ಟಿದ್ದ ಆಭರಣ ಬಿಡಿಸಿ ತರುವುದು ಮಾಡುತ್ತಿದ್ದ. 2016ರಲ್ಲಿ ಈತ ದೇಗುಲದ ಒಟ್ಟು 66 ಆಭರಣಗಳನ್ನು ಸುಮಾರು 172 ಸಂದರ್ಭದಲ್ಲಿ ಅಡವು ಇಟ್ಟಿದ್ದ ಎಂದು ವರದಿಯು ಉಲ್ಲೇಖಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries