ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತ್ ಮಟ್ಟದ ಅಂಗನವಾಡಿಗಳ ಪ್ರವೇಶೋತ್ಸವ 14ನೇ ವಾರ್ಡಿನ ಬೊಲ್ಕಿನಡ್ಕ ಕಾರೆ ಅಂಗನವಾಡಿಯಲ್ಲಿ ಬುಧವಾರ ಜರಗಿತು.
ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಮಕ್ಕಳ ಹೊಸ ಶೈಕ್ಷಣಿಕ ವರ್ಷದ ಪ್ರವೇಶೋತ್ಸವವನ್ನು ಉದ್ಘಾಟಿಸಿದರು ಐಸಿಡಿಎಸ್ ಸೂಪರ್ ವೈಸರ್ ಪ್ರೇಮಲತಾ ಅಧ್ಯಕ್ಷತೆವಹಿಸಿದ್ದರು. ಆಶಾ ಕಾರ್ಯಕರ್ತೆ ಸುನೀತಾ, ಅಂಗನವಾಡಿ ಅಭಿವೃದ್ಧಿ ಸಮಿತಿಯ ಹಸೈನಾರ್ , ಅಸೀಸ್ ಕಾರೆ ಸಭೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸೀಫಾ ಪಾತಿಮ, ಅಸೀತಾ ನಾಯಕ್,ಪಾತಿಮ ಎಂ ಅವರನ್ನು ಬೀಳ್ಕೊಡಲಾಯಿತು.ನವಾಗತ ಪುಟಾಣಿ ಶ್ರೀಪ್ರಿಯಳನ್ನು ಹೂಗುಚ್ಛ ನೀಡಿ ಅಂಗನವಾಡಿಗೆ ಸ್ವಾಗತಿಸಲಾಯಿತು.
ಅಂಗನವಾಡಿ ಅಧ್ಯಾಪಕಿ ಮಂಜುಳಾ ಎಸ್ ಸ್ವಾಗತಿಸಿ ಸಹಾಯಕಿ ಸರಸ್ವತಿ ವಂದಿಸಿದರು.