ಕೊಲ್ಲಂ: ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ನಡೆದ ಮಹಿಳಾ ವೈದ್ಯೆಯ ಕೊಲೆ ಪ್ರಕರಣದಲ್ಲಿ ಎಫ್‍ಐಆರ್ ದೋಷಪೂರಿತವಾಗಿರುವುದು ಬೆಳಕಿಗೆ ಬಂದಿದೆ.
ಎಫ್‍ಐಆರ್‍ನಲ್ಲಿ ಕೊಟ್ಟಾರಕ್ಕರ ಪೆÇಲೀಸ್ ಠಾಣೆಗೆ 8.15ಕ್ಕೆ ಮಾಹಿತಿ ಲಭಿಸಿದೆ. 8.30ಕ್ಕೆ ಡಾ. ವಂದನಾ ದಾಸ್ ಸಾವು ದೃಢಪಟ್ಟಿದ್ದರೂ, 9.39 ಕ್ಕೆ ದಾಖಲಾಗಿರುವ ಎಫ್‍ಐಆರ್ ಕೊಲೆ ಯತ್ನವನ್ನು ಸೂಚಿಸುತ್ತದೆ.
ಪೆÇಲೀಸರ ಸಮ್ಮುಖದಲ್ಲಿ ಮುಂಜಾನೆ 4.30ಕ್ಕೆ ಆರೋಪಿ ನೆರೆಹೊರೆಯವರೊಂದಿಗೆ ಗಲಾಟೆ ನಡೆಸಿದ್ದ. ಆದರೆ ಯಾವುದೇ ಭದ್ರತಾ ಲೋಪವಾಗಿಲ್ಲ ಎಂಬ ನಿಲುವು ಕೇರಳ ಪೆÇಲೀಸರದ್ದು. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ಕರೆದೊಯ್ಯುವವರೆಗೂ ಯಾವುದೇ ಪ್ರಚೋದನೆ ಇದ್ದಿರಲಿಲ್ಲ ಎಂಬುದು ಪೆÇಲೀಸರು ನೀಡಿರುವ ವಿವರಣೆ. ಪೆÇಲೀಸರ ಎಫ್‍ಐಆರ್‍ನಲ್ಲಿ ವ್ಯತಿರಿಕ್ತತೆ ಇದೆ ಎಂಬ ಮಾಹಿತಿ ಹೊರಬೀಳುತ್ತಿದೆ. ಆರಂಭದಲ್ಲಿ ಆರೋಪಿ ಸಂದೀಪ್ ತನ್ನ ಬಂಧು ಹಾಗೂ ಪೆÇಲೀಸರಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಡಾ. ಮೊಹಮ್ಮದ್ ಶಿಬ್ ಹೇಳಿಕೆ ಪ್ರಕಾರ ಸಂದೀಪ್ ಮೊದಲು ಚಾಕುವಿನಿಂದ ಇರಿದಿದ್ದು ಡಾ. ವಂದನಾ ಅವರನ್ನು. ಇದನ್ನು ತಡೆಯಲು ಮುಂದಾದಾಗ ಪೆÇಲೀಸರು ಗಾಯಗೊಂಡಿದ್ದಾರೆ ಎಂದೂ ಎಫ್‍ಐಆರ್‍ನಲ್ಲಿ ಹೇಳಲಾಗಿದೆ. ಡ್ರೆಸ್ಸಿಂಗ್ ರೂಮಿನಲ್ಲಿ ಬಳಸುತ್ತಿದ್ದ ಕತ್ತರಿಯನ್ನು ಏಕಾಏಕಿ ಕಿತ್ತುಕೊಂಡ ಸಂದೀಪ್ ಮೊದಲು ವಂದನಾಳ ತಲೆಗೆ ಇರಿದು ಗಾಯಗೊಳಿಸಿದ್ದಾನೆ. ಚಾಕುವಿನಿಂದ ಇರಿದಾಗ ಪ್ರಾಣಾಪಾಯದಿಂದ ಪಾರಾಗಲು ಯತ್ನಿಸಿದಾಗ ಸಂದೀಪ್ 'ನಿನ್ನನ್ನು ಇರಿದು ಸಾಯಿಸುತ್ತೇನೆ' ಎಂದು ಮತ್ತೆ ವಂದನಾಳ ವಿರುದ್ಧ ತಿರುಗಿಬಿದ್ದನೆಂದು ಬರೆಯಲಾಗಿದೆ. ನಂತರ ವೀಕ್ಷಣಾ ಕೊಠಡಿಗೆ ಓಡಿ ಬಂದ ಸಂದೀಪ್ ವೈದ್ಯರ ಕುತ್ತಿಗೆ ಮತ್ತು ತಲೆಗೆ ಚಾಕುವಿನಿಂದ ಇರಿದಿದ್ದಾನೆ. ತಡೆಯಲು ಬಂದ ಪೆÇಲೀಸರು, ಅಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆÉ. ಆಸ್ಪತ್ರೆಯ ಕುರ್ಚಿಗಳು ಮತ್ತು ಉಪಕರಣಗಳನ್ನು ಒಡೆದು ಹಾಕಲಾಗಿದೆ ಎಂದೂ ಎಫ್‍ಐಆರ್‍ನಲ್ಲಿ ಹೇಳಲಾಗಿದೆ.
ಪ್ರತ್ಯಕ್ಷದರ್ಶಿ ಹಾಗೂ ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ಹೇಳಿಕೆಗಳು ಪೆÇಲೀಸರ ಎಫ್ಐಆರ್ ಗಿಂತ ವ್ಯತಿರಿಕ್ತವಾಗಿದೆ. ಮೊದಲು ಚೂರಿ ಇರಿತಕ್ಕೆ ಒಳಗಾದವರು ಪೆÇಲೀಸರೇ ಎಂದು ಎಡಿಜಿಪಿ ಹೇಳಿದ್ದಾರೆ. ಆದರೆ ವಂದನಾಗೆ ಮೊದಲು ಚೂರಿ ಇರಿಯಲಾಗಿದೆ ಎಂದು ಎಫ್‍ಐಆರ್‍ನಲ್ಲಿ ಹೇಳಲಾಗಿದೆ.





