HEALTH TIPS

ಬಿಪಿ ನಿಯಂತ್ರಿಸಲು ಅಜ್ವೈನ್ ಹೇಗೆ ಬಳಸಬೇಕು?

 ವಯಸ್ಸು 40 ದಾಟುತ್ತಿದ್ದಂತೆ ಬಹುತೇಕರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಅತ್ಯಧಿಕ ರಕ್ತದೊತ್ತಡ ಕೂಡ ಒಂದಾಗಿದೆ. ಬಿಪಿ ಸಮಸ್ಯೆ ಮುಕ್ತ ವ್ಯಕ್ತಿಗಳಿರುವ ಮನೆಯೇ ತುಂಬಾ ಅಪರೂಪ, ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಬಿಪಿ ಸಮಸ್ಯೆ ಕಂಡು ಬರುತ್ತಿದೆ. ಬದಲಾದ ಜೀವನಶೈಲಿ, ಅತ್ಯಧಿಕ ಮಾನಸಿಕ ಒತ್ತಡದ ಕೆಲಸ ಇವೆಲ್ಲಾ ರಕ್ತದೊತ್ತಡ ಸಮಸ್ಯೆಯನ್ನು ಹೆಚ್ಚು ಮಾಡುತ್ತಿದೆ.


ಬಿಪಿ ಸಮಸ್ಯೆ ನಿರ್ಲಕ್ಷ್ಯ ಮಾಡುವಂತಿಲ್ಲ, ಏಕೆಂದರೆ ಬಿಪಿ ಹೆಚ್ಚಾದರೆ ಪಾರ್ಶ್ವವಾಯು, ಹೃದಯಾಘಾತ ಈ ಬಗೆಯ ಅಪಾಯ ಅಧಿಕ. ರಕ್ತದೊತ್ತಡ ನಿಯಂತ್ರಣಕ್ಕೆ ಹಲವಾರು ಮದ್ದುಗಳಿವೆ, ಅದರಲ್ಲೊಂದು ಅಜ್ವೈನ್. ಬಿಪಿ ನಿಯಂತ್ರಣಕ್ಕೆ ಈ ಅಜ್ವೈನ್‌ ಹೇಗೆ ಬಳಸಬೇಕು ಎಂದು ನೋಡೋಣ ಬನ್ನಿ:

ಅನೇಕ ರೀತಿಯಲ್ಲಿ ಅಜ್ವೈನ್‌ ಪ್ರಯೋಜನಕಾರಿ:'

ಅಜ್ವೈನ್‌ನಲ್ಲಿ ಗಾಯ ಗುಣಪಡಿಸುವ ಗುಣವಿದೆ, ಇದರಲ್ಲಿ ನಾರಿನಂಶ, ಪ್ರೊಟೀನ್‌, ಕಬ್ಬಿಣದಂಶ, ಸೊಡಿಯಂ, ಪೊಟಾಷ್ಯಿಯಂ, ಮೆಗ್ನಿಷ್ಯಿಯಂ, ವಿಟಮಿನ್ ಎ, ವಿಟಮಿನ್‌ ಬಿ 9, ಒಮೆಗಾ 3 ಕೊಬ್ಬಿನಂಶ, ಆ್ಯಂಟಿಆಕ್ಸಿಡೆಂಟ್‌ ಅಂಶಗಳಿರುವುದರಿಂದ ಅನೇಕ ರೀತಿಯಲ್ಲಿ ಪ್ರಯೋಜನಕಾರಿ.
ಅಜ್ವೈನ್‌ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಇದು ಹೃದಯ ಆರೋಗ್ಯ ಕಾಪಾಡುತ್ತದೆ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ, ಕೊಲೆಸ್ಟ್ರಾಲ್ ಕೂಡ ನಿಯಂತ್ರಿಸುತ್ತದೆ.

ರಕ್ತದೊತ್ತಡ ನಿಯಂತ್ರಣಕ್ಕೆ ಅಜ್ವೈನ್
ರಕ್ತದೊತ್ತಡ ನಿಯಂತ್ರಣಕ್ಕೆ ಅಜ್ವೈನ್‌ ಬಳಸುವ ವಿಧಾನ ತುಂಬಾ ಸರಳವಾಗಿದೆ:
* ರಾತ್ರಿ ಮಲಗುವ ಒಂದು ಚಮಚ ಅಜ್ವೈನ್‌ ಅನ್ನು ಒಂದು ಕಪ್‌ ನೀರಿನಲ್ಲಿ ನೆನೆಹಾಕಿ.
* ಮಾರನೇಯ ದಿನ ಆ ನೀರನ್ನು ಕುದಿಸಬೇಕು, ನಂತರ ಸೋಸಿ ತಣ್ಣಗಾಗಲು ಬಿಡಿ. ನಂತರ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
ಅಜ್ವೈನ್‌ನ ಪ್ರಮುಖ ಪ್ರಯೋಜ ಸಿಗಲು ನೀವು ಅಜ್ವೈನ್‌ ಅನ್ನು ಮಿತಿಯಲ್ಲಿ ಸೇವಿಸಬೇಕು. 1 ಚಮಚಕ್ಕಿಂತ ಅಧಿಕ ಸೇವಿಸಬೇಡಿ.

ನೀವು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಅಜ್ವೈನ್‌ ನೀರು ಕುಡಿಯುವುದರಿಂದ ರಕ್ತದೊತ್ತಡ ನಿಯತ್ರಣದಲ್ಲಿಡುವುದು ಮಾತ್ರವಲ್ಲ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:
ಜೀರ್ಣಕ್ರಿಯೆಗೆ ಒಳ್ಳೆಯದು: ಹೊಟ್ಟೆಯ ಆರೋಗ್ಯಕ್ಕೆ ಅಜ್ವೈನ್‌ ತುಂಬಾ ಒಳ್ಳೆಯದು. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವುದು. ಅಜ್ವೈನ್‌ ಹಾನಿಕಾರಕ ಬ್ಯಾಕ್ಟಿರಿಯಾಗಳಾದ ಇ ಕಾಲಿ, ಸಲ್ಮೋನಿಲಾ ಇವುಗಳ ವಿರುದ್ಧ ಹೋರಾಡಿ ಫುಡ್ ಪಾಯಿಸನ್ ಆಗುವುದನ್ನು ತಡೆಗಟ್ಟುತ್ತದೆ. ಅನ್ನನಾಳ, ಕರಳಿನಲ್ಲಿ ಉಂಟಾದ ಉರಿಯೂತ ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿದೆ. ಅಸಿಡಿಟಿ, ಅಲ್ಸರ್‌ ಈ ಬಗೆಯ ಸಮಸ್ಯೆ ತಡೆಗಟ್ಟುವಲ್ಲಿ ಪ್ರಯೋಜನಕಾರಿಯಾಗಿದೆ.

ಸಾಮಾನ್ಯ ಶೀತ, ಕೆಮ್ಮು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ: ಇದು ಶ್ವಾಸಕೋಶದ ಆರೋಗ್ಯ ಉತ್ತಮವಾಗಿಡುವುದರಿಂದ ಶೀತ, ಕೆಮ್ಮು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ನಿಮಗೆ ಆಗಾಗ ಶೀತ, ಕೆಮ್ಮು ಸಮಸ್ಯೆ ಕಾಡುತ್ತಿದ್ದರೆ ಅಥವಾ ಅಸ್ತಮಾ ಸಮಸ್ಯೆಯಿದ್ದರೆ ಅಜ್ವೈನ್ ಪುಡಿ ಮಾಡಿಟ್ಟು ಅದನ್ನು ಸ್ವಲ್ಪ ಬೆಲ್ಲದ ಜೊತೆ ಸೇವಿಸುವುದರಿಂದ ನೀವು ಉತ್ತಮ ಪ್ರಯೋಜನ ಪಡೆಯಬಹುದು.

ಸಂಧಿವಾತಕ್ಕೆ ಒಳ್ಳೆಯದು: ನೀವು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಅಜ್ವೈನ್‌ ನೀರು ಕುಡಿಯುವುದರಿಂದ ಸಂಧಿವಾತದ ಸಮಸ್ಯೆಗೂ ಒಳ್ಳೆಯದು. ಇದನ್ನು ಬಳಸುವುದರಿಂದ ರುಮೆಟೊ ಆರ್ಥರೈಟಿಸ್‌ನಂಥ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ, ಅಲ್ಲದೆ ಕ್ರೋನಿಕ್ ಅಟೊಇಮ್ಯೂನೆ ಇನ್‌ಫ್ಲೇಮಟರಿ ಕಾಯಿಲೆ ತಡೆಗಟ್ಟಬಹುದು.

ಅಜ್ವೈನ್‌ ನೀರು ಕುಡಿಯುವುದರಿಂದ ಅಡ್ಡಪರಿಣಾಮವಿದೆಯೇ?
ಅಜ್ವೈನ್‌ ನೀರನ್ನು ಮಿತಿಯಲ್ಲಿ ಸೇವಿಸುವುದರಿಂದ ಯಾವುದೇ ಅಡ್ಡೊರಿಣಾಮ ಉಂಟಾಗುವುದಿಲ್ಲ. ಆದರೆ ಅತಿಯಾದರೆ ಅಸಿಡಿಟಿ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು, ಸುಸ್ತು, ವಾಂತಿ, ತ್ವಚೆ ಅಲರ್ಜಿ, ತಲೆನೋವು ಮುಂತಾದ ಸಮಸ್ಯೆ ಕಂಡು ಬರುವುದು. ದಿನದಲ್ಲಿ ಒಂದು ಚಮಚ ಅಜ್ವೈನ್ ಬಳಸಿದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries