HEALTH TIPS

ಮಹಿಳೆಯರ ನಿರ್ಭಯ ಓಡಾಟಕ್ಕೆ ಎಡರಂಗ ಸರ್ಕಾರ ಅವಕಾಶ ಕಲ್ಪಿಸಬೆಕು-ಬಿಜೆಪಿ

          ಕಾಸರಗೋಡು:ಕೇರಳದ ಮಹಿಳೆಯರು ಭಯದ ವಾತಾವರಣದಲ್ಲಿ ಕಾಲಕಳೆಯಬೇಕದ ಸನ್ನಿವೇಶವಿದ್ದು,  ನಿರ್ಭಯವಾಗಿ ಹಗಲು ರಾತ್ರಿ ಒಂಟಿಯಾಗಿ ಓಡಾಡಲು ಮಹಿಳೆಯರಿಗೆ ಅವಕಾಶ ಕಲ್ಪಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಆಗ್ರಹಿಸಿದ್ದಾರೆ.

ಅವರು ಪಿಣರಾಯಿ ವಿಜಯನ್ ನೆತೃತ್ವದ ಎಡರಂಗ ಸರ್ಕಾರದ ಮಹಿಳಾ ವಿರೋಧಿ ಧೋರಣೆ ಖಂಡಿಸಿ ಮಹಿಳಾ ಮೋರ್ಚಾ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿ ಕಚೆರಿ ಎದುರು ನಡೆಸಿದ ಪ್ರತಿಭಟನಾ ಧರಣಿ ಉದ್ಘಾಟಿಸಿ ಮಾತನಾಡಿದರು.

          ಕಳೆದ ಏಳು ವರ್ಷಗಳ ಎಡರಂಗದ ಆಡಳಿತಾವಧಿಯಲ್ಲಿ ಮಹಿಳೆಯರ ಮೇಲಿನ ಅತ್ಯಚಾರ, ಕೊಲೆ, ಸುಲಿಗೆ ಗಣನೀಯವಗಿ ಹೆಚ್ಚಾಗಿದೆ.  ಮಹಿಳೆಯರು ಭಯವಿಲ್ಲದೆ ಕೆಲಸ ಮಾಡಲು ಅಥವಾ ವಾಹನಗಳಲ್ಲಿ ಪ್ರಯಾಣಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಮಹಿಳಾ ಅತ್ಯಾಚಾರ ಮತ್ತು ಪೆÇೀಕ್ಸೊ ಪ್ರಕರಣಗಳಲ್ಲಿ ಎಡ ಮತ್ತು ಬಲ ರಂಗಗಳ ಮುಖಂಡರು ಮತ್ತು ಕಾರ್ಯಕರ್ತರು ನಾಣ್ಯದ ಎರಡು ಮುಖಗಳಂತೆ ಭಾಗಿಯಾಗುತ್ತಿದ್ದಾರೆ. ಕೆಲಸದ ಸ್ಥಳದಲ್ಲಿಯೂ ಮಹಿಳೆಯರು ಕೊಲೆಯಾಗುತ್ತಿರುವುದು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಿರುವುದಕ್ಕೆ ನಿದಶ್ನವಾಗಿದೆ ಎಂದು ತಿಳಿಸಿದರು. 

           ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪುಷ್ಪಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ರತಿ,  ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಜಿಲ್ಲಾ ಉಪಾಧ್ಯಕ್ಷೆ ಎಂ. ಜನನಿ, ಕಾರ್ಯದರ್ಶಿ ಎಂ. ಉಮಾ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಅಂಜು ಜೋಸ್ಟಿ,  ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಶ್ರೀಲತಾ ಟೀಚರ್, ಕೋಶಾಧಿಕಾರಿ ವೀಣಾಅರುಣ್, ಕಾರ್ಯದರ್ಶಿ ರಬಿತಾ, ಜಿಲ್ಲಾ ಪಂಚಾಯತ್ ಸದಸ್ಯೆ ಶೈಲಜಾಭಟ್, ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷೆ ಪ್ರಮೀಳಾ ಮಜಲ್ ಉಪಸ್ಥಿತರಿದ್ದರು. ಮಹಿಳಾ ಮೋರ್ಚ್ ಜಿಲ್ಲಾ ಉಪಾಧ್ಯಕ್ಷೆ ಶೋಭನಾ ಎಚ್ಚಿಕ್ಕಾನಂ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗೀತಾ ವೆಲ್ಲೂರು ವಂದಿಸಿದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries