HEALTH TIPS

ಕೇರಳದಲ್ಲಿ ಸಂಭವಿಸಿದ ಪ್ರಮುಖ ದೋಣಿ ಅಪಘಾತಗಳ ಟೈಮ್‍ಲೈನ್

             ತಿರುವನಂತಪುರಂ/ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ತಾನೂರ್‍ನಲ್ಲಿ ಭಾನುವಾರ ಸಂಭವಿಸಿದ ದೋಣಿ ದುರಂತ ಕೇರಳದಲ್ಲೇ ಸಂಭವಿಸಿದ ಮೊದಲ ದೋಣಿ ದುರಂತವೇನೂ ಅಲ್ಲ. ಕಳೆದ 10 ದಶಕಗಳಲ್ಲಿ ರಾಜ್ಯದಲ್ಲಿ 200 ಕ್ಕೂ ಹೆಚ್ಚು ಜನರನ್ನು ವಿವಿಧ ದುರಂತಗಳ ಮೂಲಕ ಬಲಿ ತೆಗೆದುಕೊಂಡಿವೆ.

          ದೋಣಿ ದುರಂತಗಳ ಕಾಲಾನುಕ್ರಮವು 1924 ರಿಂದ ಪ್ರಾರಂಭವಾಗಿ ಮೇ 7, 2023 ರಂದು 22 ಜೀವಗಳನ್ನು ಬಲಿ ತೆಗೆದುಕೊಳ್ಳುವ ಘಡನೆಯೊಂದಿಗೆ ಸುಧೀರ್ಘ ಇತಿಹಾಸ ಹೊಂದಿದೆ. 

         1924: ಕೊಲ್ಲಂನಿಂದ ಕೊಟ್ಟಾಯಂಗೆ ದೋಣಿ ಪಾಲಾ ನದಿಯಲ್ಲಿ ಮುಳುಗಿ 24 ಜನರು ಮೃತರಾಗಿದ್ದರು.  ಕೇರಳದ ತ್ರಿಮೂರ್ತಿಗಳಲ್ಲೊಬ್ಬರಾದ ಮಹಾಕವಿ ಕುಮಾರನಾಸನ್ ದುರಂತದಲ್ಲಿ ನಿಧನರಾದರು.

           ಮಾರ್ಚ್ 19, 1980: ಕೊಚ್ಚಿಯ ಕನ್ನಮಲಿಯಲ್ಲಿ ಸ್ಥಳೀಯ ಚರ್ಚ್‍ನ ಯಾತ್ರಾರ್ಥಿಗಳನ್ನು ಸಾಗಿಸುತ್ತಿದ್ದ ದೋಣಿ ಮುಳುಗಿ 30 ಜೀವಗಳನ್ನು ಕಳೆದುಕೊಂಡಿದ್ದರು. 

          ಸೆಪ್ಟೆಂಬರ್ 25, 1983: ಎರ್ನಾಕುಳಂ ಜಿಲ್ಲೆಯ ವಲ್ಲರ್ಪದಂ ಪ್ರದೇಶದಲ್ಲಿ ಚರ್ಚ್ ಹಬ್ಬದಂದು ಹಿಂದಿರುಗುತ್ತಿದ್ದಾಗ ದೋಣಿ ದುರಂತದಲ್ಲಿ 18 ಜನರು ಸಾವನ್ನಪ್ಪಿದರು.

        ಜುಲೈ 27, 2002: ಅಲಪ್ಪುಳದ ಮುಹಮ್ಮದಿಂದ ಹೊರಟಿದ್ದ ಕೇರಳ ಜಲಸಾರಿಗೆ ಇಲಾಖೆಯ ಎ53 ದೋಣಿಯೊಂದು ರಾಜ್ಯದ ಕೊಟ್ಟಾಯಂ ಜಿಲ್ಲೆಯ ಕುಮಾರಕೋಮ್ ಬಳಿಯ ವೆಂಬನಾಡ್ ಸರೋವರದಲ್ಲಿ ಮುಳುಗಿ 29 ಜನರು ಸಾವನ್ನಪ್ಪಿದರು. ಮೃತರಲ್ಲಿ 15 ಮಹಿಳೆಯರು ಮತ್ತು ಒಂಬತ್ತು ತಿಂಗಳ ಮಗು ಸೇರಿತ್ತು. ಜೊತೆಗೆ ಹಲವಾರು ಉದ್ಯೋಗಾಕಾಂಕ್ಷಿಗಳು ಪಿಎಸ್ ಸಿ ಪರೀಕ್ಷೆಗೆ ಹಾಜರಾಗಲು ಕೊಟ್ಟಾಯಂಗೆ ತೆರಳುತ್ತಿದ್ದರು.

           ಆಗಸ್ಟ್ 30, 2004: ಕೊಲ್ಲಂ ಕರಾವಳಿಯಲ್ಲಿ 7 ದೋಣಿ ಕಾರ್ಮಿಕರು ಮುಳುಗಿ ಸಾವನ್ನಪ್ಪಿದರು.

           ಜನವರಿ 2, 2005: ಅರಬ್ ಪ್ರಜೆಗಳು ಸೇರಿದಂತೆ 4 ಜನರು ವೆಂಬನಾಡ್ ಸರೋವರದಲ್ಲಿ ಮುಳುಗಿದ್ದರು.

       ಫೆಬ್ರುವರಿ 20, 2007: ರಾಜ್ಯದ ಎರ್ನಾಕುಳಂ ಜಿಲ್ಲೆಯ ಪೆರಿಯಾರ್ ನದಿಯ ಬಳಿಯ ತಟ್ಟೆಕಾಡ್ ಎಂಬಲ್ಲಿ ಸೋರಿಕೆಯಿಂದಾಗಿ ದೋಣಿ ನೀರು ತೆಗೆದುಕೊಂಡು 14 ಮಕ್ಕಳು ಮತ್ತು ಮೂವರು ಶಿಕ್ಷಕರು ಸಾವನ್ನಪ್ಪಿದಾಗ ಶಾಲೆಯ ಪಿಕ್ನಿಕ್ ದುರಂತವಾಗಿ ಮಾರ್ಪಟ್ಟಿತು. ಗರಿಷ್ಠ ಆರು ಮಂದಿ ಸಾಮಥ್ರ್ಯದ ದೋಣಿಯಲ್ಲಿ 61 ಪ್ರಯಾಣಿಕರಿದ್ದರು ಎಂದು ನಂತರ ತಿಳಿದುಬಂದಿತು. 

          ಸೆಪ್ಟೆಂಬರ್ 30, 2009: ಮುಲ್ಲಪೆರಿಯಾರ್ ಜಲಾಶಯದ ಆಳವಾದ ಭಾಗಗಳಲ್ಲಿ ಒಂದಾದ ಜಲಕನ್ಯಕ ಎಂಬ ಡಬಲ್ ಡೆಕ್ಕರ್ ಪ್ರಯಾಣಿಕ ದೋಣಿ ಮುಳುಗಿ 45 ಪ್ರವಾಸಿಗರು ಸಾವನ್ನಪ್ಪಿದರು. 75 ಸಾಮಥ್ರ್ಯದ ದೋಣಿಯಲ್ಲಿ 80ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.

           ಡಿಸೆಂಬರ್ 12, 2011: ರಾಜ್ಯದ ಅಲಪ್ಪುಳ ಜಿಲ್ಲೆಯ ಕುತಿಯಾತೋಡು ಎಂಬಲ್ಲಿ ದೋಣಿಯೊಂದು ಮುಳುಗಿ ಇಬ್ಬರು ಸಾವನ್ನಪ್ಪಿದರು.

         ಜನವರಿ 26, 2013: ಆಲಪ್ಪುಳದ ಪುನ್ನಕ್ಕಾಡ್ ಪ್ರದೇಶದಲ್ಲಿ ಪ್ರಯಾಣಿಕ ದೋಣಿಯೊಂದು ಮುಳುಗಿ 4 ಮಂದಿ ಸಾವನ್ನಪ್ಪಿದ್ದರು. 

      ಜೂನ್ 11, 2013: ಅಲಪ್ಪುಳದ ಪುನ್ನಕ್ಕಾಡ್ ಪ್ರದೇಶದಲ್ಲಿ 'ಶಿಕಾರ' ಮಗುಚಿ ಇಬ್ಬರು ಸಾವನ್ನಪ್ಪಿದರು.

          ಮೇ 7, 2023: ಮಲಪ್ಪುರಂ ಜಿಲ್ಲೆಯ ತನೂರ್ ಪ್ರದೇಶದ ತೂವಲ್ತೀರಂ ಕಡಲತೀರದ ಸಮೀಪವಿರುವ ನದೀಮುಖದ ಬಳಿ ದೋಣಿ ಸವಾರಿ ಮಾಡುತ್ತಿದ್ದಾಗ ಡಬಲ್ ಡೆಕ್ಕರ್ ಮನರಂಜನಾ ದೋಣಿ ಮುಳುಗಿ 22 ಜನರು, ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries