ಬದಿಯಡ್ಕ: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್ ಕುಂಬಳೆ ಉಪಜಿಲ್ಲಾ ಸಮಿತಿಯ ವತಿಯಿಂದ ಈ ಶೈಕ್ಷಣಿಕ ವರ್ಷದಲ್ಲಿ ಸಂಘಟನೆಯ ನಿವೃತ ಅಧ್ಯಾಪಕರಿಗೆ ವಿದಾಯ ಕೂಟ ಸಮಾರಂಭ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಕುಂಬಳೆ ಉಪ ಜಿಲ್ಲಾಧ್ಯಕ್ಷ ಶಿಯಾಬುದ್ದೀನ್ ಮಾಸ್ತರ್ ವಹಿಸಿದ್ದರು. ಜಿಲ್ಲಾಧ್ಯಕ್ಷ ಪ್ರಶಾಂತ್ ಕಾನತ್ತೂರು ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಗೋಪಾಲಕೃಷ್ಣ ಮಾಸ್ತರ್, ವಿದ್ಯಾಭ್ಯಾಸ ಜಿಲ್ಲಾ ಕಾರ್ಯದರ್ಶಿ ಜಲಜಾಕ್ಷಿ ಟೀಚರ್, ಕೆ ಪಿ ಎಸ್ ಟಿ ಎ ಭಾಷಾ ಅಲ್ಪಸಂಖ್ಯಾತ ಸೆಲ್ ರಾಜ್ಯ ಸಂಯೋಜಕ ನಿರಂಜನ್ ರೈ ಪೆರಡಾಲ, ರಾಧಾಕೃಷ್ಣ ಮಾಸ್ತರ್,ಯೂಸುಫ್ ಕೆ. ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸಂಘಟನೆಯ ಮಾಜಿ ಜಿಲ್ಲಾ ನೇತಾರ, ನಿವೃತ್ತ ಮುಖ್ಯೋಪಾಧ್ಯಾಯ ಗಂಗಾಧರ ಶೆಟ್ಟಿ, ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಪ್ರಾಂಶುಪಾಲ ಯತೀಶ್ ಕುಮಾರ್ ರೈ, ಕಾರಡ್ಕ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಪದ್ಮಜಾ ಟೀಚರ್, ಕುಂಞ ರಾಮ ಮಾಸ್ತರ್ ಬೆಳ್ಳೂರು, ಸರಸಿಜಾಕ್ಷನ್ ನಂಬಿಯಾರ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಉಪಜಿಲ್ಲಾ ಕಾರ್ಯದರ್ಶಿ ಶರತ್ ಚಂದ್ರ ಶೆಟ್ಟಿ ಶೇಣಿ ಸ್ವಾಗತಿಸಿ, ವಿನೋದ್ ನಂದಕುಮಾರ್ ವಂದಿಸಿದರು.






