HEALTH TIPS

SSLC ಬಳಿಕ ಮುಂದೇನು? ಪೋಷಕರೇ ನಿಮ್ಮ ಮಗುವಿಗೆ ಸರಿಯಾದ ಸ್ಟ್ರೀಮ್ ಯಾವುದು?

 ವಿಧ್ಯಾರ್ಥಿ ಜೀವನದಲ್ಲಿ ಬಹು ದೊಡ್ಡ ಮಹತ್ವದ ಘಟ್ಟಗಳೆಂದರೆ ಎಸ್‌ಎಸ್ಎಲ್‌ಸಿ ಹಾಗೂ ಪಿಯುಸಿ. ಮುಂದೇನು ಆಗಬೇಕು ಎಂದು ತೀರ್ಮಾನಿಸಿ ಗುರಿ ಮುಟ್ಟಲು ಪ್ರಯತ್ನಿಸುವುದು ಇದೇ ಹಂತದಲ್ಲಿ. ಎಸ್‌ಎಸ್‌ಎಲ್‌ಸಿ ನಂತರ ವಾಟ್‌ ನೆಕ್ಟ್ಸ್‌ ಎಂದು ಕಾಡುವುದು ಸಹಜ, ಏಕೆಂದರೆ ಈ ವಯಸ್ಸಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಪಕ್ವತೆ ತುಂಬಾ ಮಕ್ಕಳಲ್ಲಿ ಇಲ್ಲದಿದ್ದರೂ ನನಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂಬುವುದು ಮಕ್ಕಳಿಗೆ ಖಂಡಿತ ಗೊತ್ತಿರುತ್ತದೆ. ಆದ್ದರಿಂದ ಪೋಷಕರೇ ಮಕ್ಕಳ ಆಸಕ್ತಿಗೆ ಕಿವಿಕೊಡಿ.

ಮಾರ್ಕ್ಸ್‌ ಒಂದೇ ಭವಿಷ್ಯ ನಿರ್ಧಾರ ಮಾಡುವುದಿಲ್ಲ
ಬಹುತೇಕ ಪೋಷಕರು ಮಾರ್ಕ್ಸ್‌ ಒಂದೇ ಮಕ್ಕಳ ಭವಿಷ್ಯ ನಿರ್ಧಾರ ಮಾಡುತ್ತದೆ ಎಂದು ತಪ್ಪಾಗಿ ಭಾವಿಸಿರುತ್ತಾರೆ. ಒಳ್ಳೆಯ ಅಂಕ ಗಳಿಸಿದವರೂ ಮಾತ್ರ ಒಳ್ಳೆಯ ಕೋರ್ಸ್‌ಗೆ ಅರ್ಹರು ಎಂದು ತಪ್ಪಾಗಿ ಭಾವಿಸುತ್ತಾರೆ.

ಮಾರ್ಕ್ಸ್‌ ಆಧಾರದ ಮೇಲೆ ಮಕ್ಕಳು ಯಾವ ಕೋರ್ಸ್‌ ತೆಗೆಯಬೇಕೆಂದು ನೀವೇ ನಿರ್ಧರಿಸಬೇಡಿ
ತುಂಬಾ ಮಾರ್ಕ್ಸ್‌ ತೆಗೆದರೆ ಸೈನ್ಸ್, ಕಾಮರ್ಸ್, ಮಾರ್ಕ್ಸ್‌ ಸ್ವಲ್ಪ ಕಡಿಮೆ ತೆಗೆದರೆ ಆರ್ಟ್ಸ್‌, ಇದು ಸಾಮಾನ್ಯವಾಗಿ ಕಾಣಸಿಗುವ ಟ್ರೆಂಡ್‌. ಟಾಪ್‌ ಮಾರ್ಕ್ಸ್‌ ತೆಗೆದು ಆರ್ಟ್ಸ್ ಆಯ್ಕೆ ಮಾಡಿದರೆ ನೀನ್ಯಾಕೆ ಇದನ್ನು ಮಾಡುತ್ತಿದ್ದೀಯ, ಸೈನ್ಸ್ ಮಾಡಬಹುದಿತ್ತಲ್ವಾ ಎಂದು ಮಕ್ಕಳ ಮನಸ್ಸಿನಲ್ಲಿ ಅವರೇನೋ ದೊಡ್ಡ ತಪ್ಪು ಮಾಡಿದ ಭಾವನೆ ತುಂಬುತ್ತೇವೆ.

ಕೆಲ ಮಕ್ಕಳಿಗೆ ವಿಜ್ಞಾನ, ಗಣಿತ ಇಷ್ಟವಿರುತ್ತದೆ, ಆದರೆ ಸಮಾಜ ವಿಜ್ಞಾನ ಇಷ್ಟವಿರಲ್ಲ, ಇಂಗ್ಲಿಷ್‌, ಕನ್ನಡದಲ್ಲೂ ಅಧಿಕ ಅಂಕ ಗಳಿಸಿರಲ್ಲ, ವಿಜ್ಞಾನ, ಗಣಿತದಲ್ಲಿ ಒಳ್ಳೆಯ ಅಂಕವೇ ಗಳಿಸಿರುತ್ತಾರೆ. ಆದರೂ ಶೇ. 80 ಬಂದಿಲ್ಲ, ಸೇ. 90 ಬಂದಿಲ್ಲ ಹಾಗಾಗಿ ಆರ್ಟ್ಸ್‌ ಸೂಕ್ತ ಅಂತ ಕೊಡಿಸಿದರೆ ಇಷ್ಟವೇ ಇಲ್ಲದ ಸಬ್ಜೆಕ್ಟ್‌ನಲ್ಲಿ ಮತ್ತೆ ಓದಲು ಗಳಿಸಿದರೆ ಆ ಮಗುವಿನ ಭವಿಷ್ಯದ ಗತಿಯೇನು?

ಪೋಷಕರೇ ಈ ಸಮಯದಲ್ಲಿ ನಿಮ್ಮ ಮಕ್ಕಳ ಭವಿಷ್ಯದ ನಿರ್ಧಾರ ಯೋಚಿಸಿ ತೆಗೆದುಕೊಳ್ಳಿ
ಒಂದು ಸಬ್ಜೆಕ್ಟ್‌ ತುಂಬಾ ಒಳ್ಳೆಯದು, ಮತ್ತೊಂದು ಸಬ್ಜೆಕ್ಟ್‌ ವ್ಯರ್ಥ ಎಂಬುವುದು ಇಲ್ವೇ ಇಲ್ಲ. ಎಲ್ಲಾ ವಿಷಯಗಳಿಗೆ ಅದರದ್ದೇ ಆದ ಪ್ರಾಮುಖ್ಯತೆ, ಉದ್ಯೋಗ ಅವಕಾಶಗಳಿವೆ, ದೊಡ್ಡ ಹುದ್ದೆ ಪಡೆಯಬಹುದು. ಆದ್ದರಿಂದ ಪೋಷಕರೇ ನಿಮ್ಮ ಮಕ್ಕಳಿಗೆ ಯಾವುದು ಇಷ್ಟವೋ ಆ ಸಬ್ಜೆಕ್ಟ್‌ ಓದಲು ಅನುಮತಿ ನೀಡಿ, ನಿಮ್ಮ ಅಭಿಪ್ರಾಯ ಮಕ್ಕಳ ಮೇಲೆ ಹೇರಲೇಬೇಡಿ. ಈಗ ನೀವು ಮಾಡಬೇಕಾಗಿರುವುದು ಏನೆಂದರೆ

ಮಕ್ಕಳ ಆಸಕ್ತಿ ಬಗ್ಗೆ ತಿಳಿದುಕೊಳ್ಳಿ
ನಿಮ್ಮ ಮಗ ಅಥವಾ ಮಗಳ ಜೊತೆ ಕೂತು ಮುಂದೆ ಏನು ಓದಬೇಕೆಂದ್ದೀಯ, ನಿನ್ನ ಜೀವನದ ಗುರಿಗಳೇನು ಎಂದು ಕೇಳಿ. ಈ ಪ್ರಾಯದಲ್ಲಿ ಸ್ವಂತ ನಿರ್ಧಾರ ಮಾಡುವವರಿಗಿಂತ ನನ್ನ ಸ್ನೇಹಿತ ಅಥವಾ ಸ್ನೇಹಿತೆ ಆ ಕೋರ್ಸ್‌ಗೆ ಸೇರಿಕೊಂಡಳು, ಆದ್ದರಿಂದ ನಾನೂ ಅದೇ ಕಾಲೇಜಿಗೆ, ಅದೇ ಕೋರ್ಸ್‌ಗೆ ಹೋಗುತ್ತೇನೆ ಎಂದು ಹೇಳುವವರೇ ಅಧಿಕ.

ನಿಮ್ಮ ಮಕ್ಕಳಿಗೆ ವಿವಿಧ ಕೋರ್ಸ್‌ಗಳು ಅದರ ಮಹತ್ವವ ಬಗ್ಗೆ ತಿಳಿಸಿ
ಪ್ರತಿ ಕೋರ್ಸ್‌ನ ಮಹತ್ವದ ಬಗ್ಗೆ ಅದಕ್ಕಿರುವ ಉದ್ಯೋಗ ಅವಕಾಶದ ಬಗ್ಗೆ ಎಲ್ಲವನ್ನು ಅವರಿಗೆ ತಿಳಿಸಿ. ಹೀಗೆ ತಿಳಿಸುವಾಗ ಯಾವುದೋ ಒಂದು ಕೋರ್ಸ್‌ಗೆ ತುಂಬಾ ಮಹತ್ವ ನೀಡಬೇಡಿ. ಎಲ್ಲಾ ಕೋರ್ಸ್‌ಗೂ ಮಹತ್ವದ ಇದೆ, ಅದರ ಬಗ್ಗೆ ನೀವು ತಿಳಿದುಕೊಂಡು ಅವರಿಗೆ ತಿಳಿಸಿ. ಇದರಿಂದ ಮಕ್ಕಳಿಗೆ ಒಂದು ನಿರ್ಧಾರಕ್ಕೆ ಬರಲು ಸಹಾಯ ಮಾಡುತ್ತದೆ.

ಅವರ ಆಸಕ್ತಿಯ ಕೋರ್ಸ್‌ಗೆ ಸೇರಿಕೊಳ್ಳುವುದರಿಂದ ಪ್ರಯೋಜನಗಳು
ಅವರಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಆ ಕೋರ್ಸ್‌ಗೆ ಸೇರಿಸಿದರೆ ಅವರು ಆ ವಿಷಯದ ಕಡೆಗೆ ತುಂಬಾನೇ ಆಸಕ್ತಿ ತೋರುತ್ತಾರೆ. ಅಲ್ಲದೆ ಈ ಕೋರ್ಸ್‌ ಅನ್ನು ನಾನು ಆಯ್ಕೆ ಮಾಡಿದ್ದು, ನನ್ನ ಪೋಷಕರು ಒತ್ತಾಯ ಮಾಡಿದ್ದಲ್ಲ ಆದ್ದರಿಂದ ನಾನು ಚೆನ್ನಾಗಿ ಓದಬೇಕು ಎಂಬ ಜವಾಬ್ದಾರಿಯೂ ಬರುವುದು. ಹಾಗಾಗಿ ಮಕ್ಕಳಿಗೆ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುವುದು.

ಕೌನ್ಸಿಲರ್ ಸಹಾಯನೂ ಪಡೆಯಬಹುದು
ಕೆಲವೊಮ್ಮೆ ಮಕ್ಕಳಿಗೆ ತಾನು ಯಾವ ಸ್ಟ್ರೀಮ್ ( ವಿಜ್ಞಾನ/ವಾಣಿಜ್ಯ/ ಕಲಾ ವಿಭಾಗ) ತೆಗೆದುಕೊಳ್ಳಬೇಕೆಂಬ ಗೊಂದಲ ಉಂಟಾಗುವುದು. ಈ ಗೊಂದಲ ಪೋಷಕರಿಗೂ ಇದ್ದಾಗ ನೀವು ಕೌನ್ಸಿಲಿಂಗ್ ಮಾಡಿಸಿದರೆ ನಿಮ್ಮ ಮಗುವಿನ ಆಸಕ್ತಿಯ ವಿಷಯ ಯಾವುದೆಂದು ಸ್ಪಷ್ಟವಾಗಿ ತಿಳಿಯಬಹುದು. ನಂತರ ಆ ಕೋರ್ಸ್‌ಗೆ ಸೇರಿಸಿದರೆ ಅವರಿಗೆ ಓದಲು ಕಷ್ಟವಾಗುವುದಿಲ್ಲ.

ಕೋರ್ಸ್‌ ವಿಷಯದಲ್ಲಿ ಕೀಳೆರಿಮೆ ಬೇಡ
ಸೈನ್ಸ್ ತಗೊಂಡ್ರೆ ಗ್ರೇಟ್ ಎಂಬ ಭಾವನೆ ಹಲವರಲ್ಲಿದೆ. ಮೊದಲೇ ಹೇಳಿದಂತೆ ಎಲ್ಲಾ ಕೋರ್ಸ್‌ಗಳು ಅದರದ್ದೇ ಆದ ಪ್ರಾಮುಖ್ಯತೆ ಹೊಂದಿದೆ. ಆರ್ಟ್ಸ್‌ ತಗೊಂಡು ಐಎಎಸ್ ಪಾಸ್‌ ಮಾಡುದವರೂ ಇದ್ದಾರೆ. ಆದ್ದರಿಂದ ನಿಮ್ಮ ಗುರಿಗೆ ಕೋರ್ಸ್‌ ಮುಖ್ಯವಾಗಬೇಕೇ ಹೊರತು ಕೋರ್ಸ್‌ನಿಂದಲೇ ನಿಮ್ಮ ಬದುಕು ರೂಪುಗೊಳ್ಳುತ್ತದೆ ಎಂಬುವುದು ತಪ್ಪು ಕಲ್ಪನೆ.

ನಿಮ್ಮ ಮನೆಯಲ್ಲಿಯೂ 10ನೇ ತರಗತಿ ಈಗಷ್ಟೇ ಮುಗಿಸಿದ ಮಕ್ಕಳಿದ್ದರೆ ಅವರು ಸರಿಯಾದ ವಿಷಯ ಆಯ್ಕೆ ಮಾಡಲು ನೆರವಾಗಿ...


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries