HEALTH TIPS

10, 12 ನೇ ತರಗತಿಯ ಟಾಪರ್ಸ್‌ಗೆ ಹೆಲಿಕಾಪ್ಟರ್ ಪಯಣ!

            ರಾಯಪುರ್: ಛತ್ತೀಸ್‌ಗಢ ರಾಜ್ಯದ 10, 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ರ‍್ಯಾಂಕ್‌ ಬಂದವರಿಗೆ (ಟಾಪರ್ಸ್) ಅಲ್ಲಿನ ಸರ್ಕಾರ ಪ್ರೋತ್ಸಾಹ ಕ್ರಮವಾಗಿ ಶನಿವಾರ ಹೆಲಿಕಾಪ್ಟರ್ ಪ್ರಯಾಣವನ್ನು ಆಯೋಜಿಸಿತ್ತು.

                ಈ ಕಾರ್ಯಕ್ರಮದಲ್ಲಿ 89 ವಿದ್ಯಾರ್ಥಿಗಳು ಭಾಗವಹಿಸಿ ಹೆಲಿಕಾಪ್ಟರ್ ಪಯಣದ ಆನಂದವನ್ನು ಅನುಭವಿಸಿದರು.

               ವಾರ್ತಾ ಇಲಾಖೆಯಿಂದ ಈ ಕಾರ್ಯಕ್ರಮವನ್ನು ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಏಳು ಸೀಟ್‌ಗಳ ಹೆಲಿಕಾಪ್ಟರ್‌ನಲ್ಲಿ ವಿದ್ಯಾರ್ಥಿಗಳು ಕನಿಷ್ಠ ಅರ್ಧ ಗಂಟೆ ಪಯಣವನ್ನು ಸರದಿಯಾಗಿ ಮಾಡಿದರು. ಶಿಕ್ಷಣ ಸಚಿವ ಪ್ರೇಮಸಾಯಿ ಸಿಂಗ್ ಈ ವೇಳೆ ಹಾಜರಿದ್ದರು.

            ಇದರಲ್ಲಿ 10 ವಿದ್ಯಾರ್ಥಿಗಳು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಪ್ರಯುಕ್ತ 'ಆತ್ಮಾನಂದ ಮಾಧವಿ ಛತ್ರ ಪ್ರೋತ್ಸಾಹ' ಯೋಜನೆಯನ್ನು ಸಿಎಂ ಭೂಪೇಶ್ ಬಗೇಲಾ ಅವರು ಕಳೆದ ವರ್ಷ ಜಾರಿಗೆ ತಂದಿದ್ದರು. ಕಳೆದ ವರ್ಷ 125 ವಿದ್ಯಾರ್ಥಿಗಳು ಹೆಲಿಕಾಪ್ಟರ್ ಪಯಣವನ್ನು ಆನಂದಿಸಿದ್ದರು. ಛತ್ತೀಸ್‌ಗಢ ರಾಜ್ಯ ಸರ್ಕಾರವೇ ಈ ಯೋಜನೆಗೆ ಹಣಕಾಸನ್ನು ಒದಗಿಸುತ್ತಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries