HEALTH TIPS

ನೆಗಡಿ ಮತ್ತು ಕೆಮ್ಮಿನ ಚಿಕಿತ್ಸೆಗೆ ಬಳಸುವ 14 ಔಷಧಿಗಳನ್ನು ನಿಷೇಧಿಸಿದ ಕೇಂದ್ರ

            ದೆಹಲಿ: ಎರಡು ಅಥವಾ ಅದಕ್ಕಿಂತ ಹೆಚ್ಚು ಸಕ್ರಿಯ ಔಷಧ ಸಂಯೋಜನೆಯನ್ನು ಒಳಗೊಂಡಿರುವ 14 ಕಾಕ್‌ಟೈಲ್ ಅಥವಾ ಸ್ಥಿರ-ಡೋಸ್ ಸಂಯೋಜನೆಯ(ಎಫ್‌ಡಿಸಿ) ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ಸರ್ಕಾರ ನಿಷೇಧಿಸಿದೆ.

                                           ಏನಿದು ಕಾಕ್​ಟೈಲ್​ ಔಷಧಿ?

          ಸ್ಥಿರ-ಡೋಸ್ ಸಂಯೋಜನೆಗಳು(FDCs) ಎಂದರೆ ಮಾತ್ರೆಯೊಂದರಲ್ಲಿ ಒಂದಕ್ಕಿಂತ ಹೆಚ್ಚು ಔಷಧಗಳನ್ನು ತರ್ಕಬದ್ಧವಾಗಿ ಸಂಯೋಜಿಸುವ ಔಷಧಿಗಳಾಗಿವೆ ಮತ್ತು ಇವುಗಳನ್ನು ಕಾಕ್ಟೈಲ್ ಔಷಧಿಗಳೆಂದೂ ಉಲ್ಲೇಖಿಸಲಾಗುತ್ತದೆ.

                                       ಏಕೆ ಬ್ಯಾನ್​ ?
              ತಜ್ಞರ ಸಮಿತಿಯು, ಬ್ಯಾನ್​ ಮಾಡಿರುವ ಎಫ್‌ಡಿಸಿಗಳು ತರ್ಕಬದ್ಧ ಸಂಯೋಜನೆಯನ್ನು ಹೊಂದಿಲ್ಲ.ಇವು ಮನುಷ್ಯರಿಗೆ ಅಪಾಯವನ್ನು ತಂದೊಡ್ಡಬಹುದು. ಸಾರ್ವಜನಿಕ ಹಿತಾಸಕ್ತಿಗಾಗಿ ಈ FDC ಗಳ ತಯಾರಿಕೆ, ಮಾರಾಟ ಅಥವಾ ವಿತರಣೆಯನ್ನು ನಿಷೇಧಿಸುವುದು ಅವಶ್ಯಕವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

                     ನೆಗಡಿ, ಕೆಮ್ಮು, ಉಸಿರಾಟದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಮುಖ್ಯವಾಗಿ ಬಳಸಲಾಗುವ 14 ಫಿಕ್ಸೆಡ್ ಡೋಸ್ ಔಷಧಿಗಳನ್ನು ನಿಷೇಧಿಸುವುದರ ಜತೆಗೆ ಸುಮಾರು 10 ಫಿಕ್ಸೆಡ್ ಡೋಸ್ ಕಾಂಬಿನೇಷನ್ ಕೆಮ್ಮಿನ ಸಿರಪ್‌ಗಳನ್ನು ಸರ್ಕಾರ ನಿಷೇಧಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries