ಉತ್ತರಕಾಶಿ: ಮಹಾ ಪಂಚಾಯತ್ ತಡೆಯುವ ಕ್ರಮವಾಗಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಹೇರಿದ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ರಾಜ್ಯದ ಪುರೊಲ ಮತ್ತು ಆಸುಪಾಸಿನ ಪಟ್ಟಣಗಳಲ್ಲಿ ಗುರುವಾರ ಮಾರುಕಟ್ಟೆ ವಹಿವಾಟು ಬಂದ್ ಆಗಿತ್ತು.
0
samarasasudhi
ಜೂನ್ 15, 2023
ಉತ್ತರಕಾಶಿ: ಮಹಾ ಪಂಚಾಯತ್ ತಡೆಯುವ ಕ್ರಮವಾಗಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಹೇರಿದ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ರಾಜ್ಯದ ಪುರೊಲ ಮತ್ತು ಆಸುಪಾಸಿನ ಪಟ್ಟಣಗಳಲ್ಲಿ ಗುರುವಾರ ಮಾರುಕಟ್ಟೆ ವಹಿವಾಟು ಬಂದ್ ಆಗಿತ್ತು.
'ಲವ್ ಜಿಹಾದ್' ಪ್ರಕರಣಗಳನ್ನು ಖಂಡಿಸಿ ವಿಎಚ್‌ಪಿ, ಬಜರಂಗದಳ ಸೇರಿದಂತೆ ವಿವಿಧ ಹಿಂದುತ್ವ ಸಂಘಟನೆಗಳ ಬೆಂಬಲದೊಂದಿಗೆ ಗುರುವಾರ ಮಹಾಪಂಚಾಯತ್ ಆಯೋಜಿಸಲು ಸ್ಥಳೀಯ ವ್ಯಾಪಾರಿ ಸಂಘಟನೆಗಳು ನಿರ್ಧರಿಸಿದ್ದವು.
ಪುರೊಲ, ಬಾರ್ಕೊಟ್, ನೌಗಾಂವ್ ನಗರಗಳಲ್ಲಿ ಮಾರುಕಟ್ಟೆ ವಹಿವಾಟು ಪೂರ್ಣ ಬಂದ್ ಆಗಿದೆ ಎಂದು ಪುರೊಲ ವ್ಯಾಪಾರ ಮಂಡಲ ಅಧ್ಯಕ್ಷ ಬ್ರಿಜ್‌ಮೋಹನ್ ಚೌಹಾಣ್, ಬಾರ್ಕೊಟ್ ವ್ಯಾಪಾರ ಮಂಡಲ ಅಧ್ಯಕ್ಷ ರಾಜಾರಾಂ ಜಾಗುಡಿ ತಿಳಿಸಿದರು.
ಸೆಕ್ಷನ್ 144 ಜಾರಿ ಜಿಲ್ಲಾಡಳಿತದ ಸರ್ವಾಧಿಕಾರವನ್ನು ಬಿಂಬಿಸುತ್ತದೆ. ನಮ್ಮ ಜನರ ಜೊತೆ ನಮ್ಮ ಭಾವನೆ ಹಂಚಿಕೊಳ್ಳುವುದು ಸಾಧ್ಯವಿಲ್ಲ ಎಂಬ ಸ್ಥಿತಿ ಇದೆ. ಇದು ಗುಲಾಮಗಿರಿಯ ಸಂಕೇತವಾಗಿದೆ ಎಂದು ಜಾಗುಡಿ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೂಗಳನ್ನು ಜಾಗೃತಿಗೊಳಿಸುವುದರ ಕ್ರಮವಾಗಿ ಮಾರುಕಟ್ಟೆ ಬಂದ್‌ಗೆ ಮುಂದಾಗಿದ್ದೇವೆ ಎಂದು ಹೇಳಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಈ ನಗರಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು. ಪುರೊಲದಲ್ಲಿ ಜೂನ್ 19ರವರೆಗೂ ಸೆಕ್ಷನ್ 144 ಜಾರಿಗೊಳಿಸಲಾಗಿದೆ.