ಶ್ರೀನಗರ : ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರಿಗೆ 10 ವರ್ಷಗಳ ಸಿಂಧುತ್ವದ ಪಾಸ್ ಪೋರ್ಟ್ ನೀಡಲಾಗಿದೆ ಎಂದು ಮೂಲಗಳು ಭಾನುವಾರ ತಿಳಿಸಿವೆ.
0
samarasasudhi
ಜೂನ್ 04, 2023
ಶ್ರೀನಗರ : ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರಿಗೆ 10 ವರ್ಷಗಳ ಸಿಂಧುತ್ವದ ಪಾಸ್ ಪೋರ್ಟ್ ನೀಡಲಾಗಿದೆ ಎಂದು ಮೂಲಗಳು ಭಾನುವಾರ ತಿಳಿಸಿವೆ.
ದೆಹಲಿ ಹೈಕೋರ್ಟ್‌ನಲ್ಲಿ ಸುದೀರ್ಘ ಕಾನೂನು ಹೋರಾಟದ ನಂತರ, ಪಾಸ್‌ಪೋರ್ಟ್ ಅನ್ನು ಮೆಹಬೂಬಾ ಮುಫ್ತಿಗೆ ನೀಡಲಾಗಿದೆ.
ನಿರ್ದಿಷ್ಟ ದೇಶಕ್ಕೆ ಸಂಬಂಧಿಸಿದಂತೆ ಪಾಸ್‌ಪೋರ್ಟ್ ನೀಡುವ ಪಾಸ್‌ಪೋರ್ಟ್ ಕಚೇರಿಯ ನಿರ್ಧಾರ ಪ್ರಶ್ನಿಸಿ ಮೆಹಬೂಬಾ ಅವರ ಪುತ್ರಿ ಇಲ್ತಿಜಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜಮ್ಮು, ಕಾಶ್ಮೀರ ಹೈಕೋರ್ಟ್ ಎರಡು ದಿನಗಳಲ್ಲಿ ನಡೆಸಲಿದೆ. ಈ ಸಂದರ್ಭದಲ್ಲಿ ಪಾಸ್‌ಪೋರ್ಟ್ ನೀಡಿರುವುದು ಗಮನಾರ್ಹ.
ಪಿಡಿಪಿ ಮುಖ್ಯಸ್ಥರಿಗೆ ಪಾಸ್‌ಪೋರ್ಟ್ ನೀಡುವ ಬಗ್ಗೆ ಮೂರು ತಿಂಗಳೊಳಗೆ ನಿರ್ಧರಿಸುವಂತೆ ಕಳೆದ ಮಾರ್ಚ್‌ನಲ್ಲಿ ದೆಹಲಿ ಹೈಕೋರ್ಟ್ ಪಾಸ್‌ಪೋರ್ಟ್ ಪ್ರಾಧಿಕಾರಕ್ಕೆ ಸೂಚಿಸಿತ್ತು.