HEALTH TIPS

ಕೋರಮಂಡಲ್ ಎಕ್ಸ್‌ಪ್ರೆಸ್‌: ನಾಲ್ಕು ದಶಕದಲ್ಲಿ 8 ಅಪಘಾತ

             ವದೆಹಲಿ: ಒಡಿಶಾದ ಬಾಲೇಸೋರ್ ಬಳಿ ಶುಕ್ರವಾರ ಸಂಜೆ ಅಪಘಾತಕ್ಕೀಡಾದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ನಾಲ್ಕು ದಶಕದಲ್ಲಿ ನಾಲ್ಕು ಬಾರಿ ಅಪಘಾತಕ್ಕೀಡಾಗಿದೆ.

               1977ರಲ್ಲಿ ಸಂಚಾರ ಆರಂಭಿಸಿದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಈವರೆಗೂ ಹಲವು ಬಾರಿ ಅಪಘಾತಕ್ಕೀಡಾಗಿದೆ.

             2002ರ ಮಾರ್ಚ್‌ 15: ನೆಲ್ಲೂರು ಜಿಲ್ಲೆಯ ಕೋವುರು ಮಂಡಲ ಮೇಲು ಸೇತುವೆ ಬಳಿ ಏಳು ಬೋಗಿಗಳು ಹಳಿ ತಪ್ಪಿವೆ. ಇದರಲ್ಲಿ ಸುಮಾರು ನೂರು ಪ್ರಯಾಣಿಕರು ಗಾಯಗೊಂಡಿದ್ದರು.‌

2009ರ ಫೆ. 13: ಒಡಿಶಾದಿಂದ ನೂರು ಕಿಲೋಮೀಟರ್ ದೂರದಲ್ಲಿರುವ ಜಾಜ್‌ಪುರ ಕಿಯೋಂಜಾರ್ ರಸ್ತೆ ಬಳಿ ಹಳಿ ತಪ್ಪಿ 15 ಪ್ರಯಾಣಿಕರು ಮೃತಪಟ್ಟು ಹಲವರು ಗಾಯಗೊಂಡಿದ್ದರು.

                2012ರ ಡಿ. 30: ಒಡಿಶಾದ ಗಂಜಾಮ್ ಜಿಲ್ಲೆಯಲ್ಲಿ ರೈಲಿಗೆ ಅಡ್ಡ ಬಂದ ಎರಡು ಮರಿ ಆನೆ ಸೇರಿ ಒಟ್ಟು ಆರು ಆನೆಗಳು ಮೃತಪಟ್ಟಿದ್ದವು. ಅಪಘಾತದಲ್ಲಿ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದರು.

2012ರ ಜ. 14ರಂದು ಲಿಂಗರಾಜ ರೈಲು ನಿಲ್ದಾಣ ಬಳಿ ರೈಲು ಬೋಗಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.

                  2015ರ ಏ. 18: ನಿಡದವೋಲು ಜಂಕ್ಷನ್ ಬಳಿ ಎರಡು ಬೋಗಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದರಿಂದ, ಅಪಾರ ನಷ್ಟ ಉಂಟಾಗಿತ್ತು.

2009ರ ಫೆ. 13: ಒಡಿಶಾದ ಜಾಜಪುರ ಬಳಿ ರೈಲಿನ ಕೆಲ ಬೋಗಿಗಳಲ್ಲಿ ಅಗ್ನಿ ಅವಘಡ ಸಂಭವಿಸಿತ್ತು

1999ರ ಆ. 15: ನಾಗವಲ್ಲಿ ನದಿ ದಾಟುವ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ 50 ಪ್ರಯಾಣಿಕರು ಮೃತಪಟ್ಟು 500 ಜನ ಗಾಯಗೊಂಡಿದ್ದರು.

           1997ರ ಆ. 15: ವಿಶಾಖಪಟ್ಟಣ ಹಾಗೂ ಬ್ರಹ್ಮಪುರ ನಡುವೆ ಸಂಭವಿಸಿದ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲು ಮುಖಾಮುಖಿ ಡಿಕ್ಕಿಯಲ್ಲಿ 75 ಪ್ರಯಾಣಿಕರು ಮೃತಪಟ್ಟಿದ್ದರು

              1977ರಲ್ಲಿ ಸಂಚಾರ ಆರಂಭಿಸಿದ ಕೋರಮಂಡಲ್ ರೈಲು ವಾರಕ್ಕೆ ಎರಡು ಬಾರಿ ಮಾತ್ರ ಸಂಚರಿಸುತ್ತಿತ್ತು. ಒಟ್ಟು 23 ಗಂಟೆ 30 ನಿಮಿಷಗಳ ಪ್ರಯಾಣದಲ್ಲಿ ವಿಜಯವಾಡ, ವಿಶಾಖಪಟ್ಟಣ ಹಾಗೂ ಭುವನೇಶ್ವರದಲ್ಲಿ ಮಾತ್ರ ನಿಲುಗಡೆ ಹೊಂದಿತ್ತು. ಹೌರಾದಿಂದ ಸಂಜೆ 5.15ಕ್ಕೆ ಹೊರಡುತ್ತಿದ್ದ ಕೋರಮಂಡಲ ಎಕ್ಸ್‌ಪ್ರೆಸ್‌ ಮದ್ರಾಸ್‌ಗೆ ಮರುದಿನ ಸಂಜೆ 4.45ಕ್ಕೆ ತಲುಪುತ್ತಿತ್ತು. ಮದ್ರಾಸ್‌ನಲಿಂದ ಬೆಳಿಗ್ಗೆ 9ಕ್ಕೆ ಹೊರಡುತ್ತಿದ್ದ ರೈಲು ಮರುದಿನ ಬೆಳಿಗ್ಗೆ 8.30ಕ್ಕೆ ಹೌರಾ ತಲುಪುತ್ತಿತ್ತು.

              ನಂತರದ ವರ್ಷಗಳಲ್ಲಿ ಈ ರೈಲು ಖರಗ್‌ಪುರ್, ಬಾಲೇಸೋರ್ ಭದ್ರಕ್, ಕುಂದ್ರಾ ರಸ್ತೆ, ಬ್ರಹ್ಮಪುರಗಳಲ್ಲಿ ನಿಲುಗಡೆ ಕಲ್ಪಿಸಲಾಯಿತು. ಇದರಿಂದಾಗಿ ಕೋರಮಂಡಲ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣ ಸಮಯ 3 ಗಂಟೆ ಹೆಚ್ಚಳವಾಯಿತು. ಪ್ರಾಯೋಗಿಕವಾಗಿ ಹೆಚ್ಚುವರಿ ನಿಲುಗಡೆಯನ್ನು 2015ರಲ್ಲಿ ಆಂಧ್ರಪ್ರದೇಶದ ತಾಡೇಪಲ್ಲಿಗುಡಂನಲ್ಲಿ ನೀಡಲಾಯಿತು. ಸದ್ಯ ಈ ರೈಲಿನ ಪ್ರಯಾಣ 33ಗಂಟೆ 20 ನಿಮಿಷವಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries