ನವದೆಹಲಿ (PTI): 'ಭಾರತ-ಬಾಂಗ್ಲಾದೇಶದ 4,096 ಕಿ.ಮೀ ಗಡಿಯುದ್ದಕ್ಕೂ ಜನರಿಗೆ ಅನುಕೂಲಕಾರಿಯಾಗಲಿರುವ ಐದು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಎರಡೂ ರಾಷ್ಟ್ರಗಳ ಗಡಿ ಭದ್ರತಾ ಪಡೆಗಳು ಒಮ್ಮತದ ನಿರ್ಧಾರ ಕೈಗೊಂಡಿವೆ' ಎಂದು ಹಿರಿಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
0
samarasasudhi
ಜೂನ್ 15, 2023
ನವದೆಹಲಿ (PTI): 'ಭಾರತ-ಬಾಂಗ್ಲಾದೇಶದ 4,096 ಕಿ.ಮೀ ಗಡಿಯುದ್ದಕ್ಕೂ ಜನರಿಗೆ ಅನುಕೂಲಕಾರಿಯಾಗಲಿರುವ ಐದು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಎರಡೂ ರಾಷ್ಟ್ರಗಳ ಗಡಿ ಭದ್ರತಾ ಪಡೆಗಳು ಒಮ್ಮತದ ನಿರ್ಧಾರ ಕೈಗೊಂಡಿವೆ' ಎಂದು ಹಿರಿಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ದೆಹಲಿಯಲ್ಲಿ ಇದೇ 11ರಿಂದ ನಡೆದ ನಾಲ್ಕು ದಿನಗಳ ಅರ್ಧವಾರ್ಷಿಕ ಸಮ್ಮೇಳನದ ಕೊನೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. 53ನೇ ಆವೃತ್ತಿಯ ಸಮ್ಮೇಳನವು ಎರಡೂ ಪಡೆಗಳ ಮುಖ್ಯಸ್ಥರ ನೇತೃತ್ವದಲ್ಲಿ ಬಿಎಸ್‌ಎಫ್‌ನ ಕಚೇರಿಯಿರುವ ಛಾವ್ಲಾದಲ್ಲಿ ನಡೆದಿದ್ದು, ಚರ್ಚೆಯ ಜಂಟಿ ದಾಖಲೆಗಳಿಗೆ ಸಹಿ ಹಾಕುವ ಮೂಲಕ ತೆರೆಕಂಡಿದೆ.
'ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಧಾರ ಎರಡೂ ರಾಷ್ಟ್ರಗಳ ಗಡಿಯಲ್ಲಿ ಬದುಕುತ್ತಿರುವ ಜನರ ಜೀವನದ ಮೇಲೆ ಅಗಾಧ ಪರಿಣಾಮ ಬೀರಲಿದೆ. ಈ ವಲಯದಲ್ಲಿ ಪ್ರಗತಿ ಮತ್ತು ಸಮೃದ್ಧಿಗೆ ಕಾರಣವಾಗಲಿದೆ. ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಎರಡೂ ರಾಷ್ಟ್ರಗಳ ನಡುವೆ ಬಲವಾದ ದ್ವಿಪಕ್ಷೀಯ ವ್ಯಾಪಾರ-ಬಾಂಧವ್ಯ ವೃದ್ಧಿಯಾಗಲು ಸಹಾಯ ಮಾಡಲಿದೆ' ಎಂದು ಬಿಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಐದು ಯೋಜನೆಗಳಲ್ಲಿ ಬೇಲಿ ನಿರ್ಮಾಣ, ಗಡಿ ರಸ್ತೆಗಳ ಅಭಿವೃದ್ಧಿ, ಭಾರತದ ಪೂರ್ವ ಭಾಗದ ಗಡಿಯಲ್ಲಿರುವ ತಡೆಗೋಡೆಯ ಬಲವರ್ಧನೆಯೂ ಸೇರಿದೆ.