ಎರ್ನಾಕುಳಂ: ಪೋರ್ಜರಿ ಪ್ರಕರಣದ ಆರೋಪಿ ಎಸ್‍ಎಫ್‍ಐ ಮಾಜಿ ನಾಯಕಿ ಕೆ.ವಿದ್ಯಾ ಇನ್ನೂ ಪೋಲೀಸರ ಕೈಗೆ ಸಿಗದೆ ಕಣ್ಣಾಮುಚ್ಚಾಲೆಯಲ್ಲಿದ್ದಾಳೆ ಎನ್ನಲಾಗಿದೆ.
ಪೊಲೀಸರ ಪ್ರಕಾರ ವಿದ್ಯಾ ಎರ್ನಾಕುಳಂ ಜಿಲ್ಲೆಯಿಂದ ಕೋಝಿಕ್ಕೋಡ್‍ಗೆ ತೆರಳಿದ್ದಾಳೆ. ಹಾಗಾಗಿ ಕೋಝಿಕ್ಕೋಡ್ ಕೇಂದ್ರವಾಗಿಟ್ಟುಕೊಂಡು ತನಿಖೆ ಪ್ರಗತಿಯಲ್ಲಿದೆ ಎನ್ನುತ್ತಾರೆ ಪೆÇಲೀಸರು.
ತನಿಖಾ ತಂಡ ನಿನ್ನೆ ಕಾಲಡಿ ಸಂಸ್ಕøತ ವಿಶ್ವವಿದ್ಯಾಲಯಕ್ಕೆ ಆಗಮಿಸಿ ವಿದ್ಯಾಳ ಸ್ನೇಹಿತರನ್ನು ವಿಚಾರಿಸಿ ಅವರ ಮನೆಗಳನ್ನು ಶೋಧಿಸಿದೆ. ಕಾಲಡಿ ವಿಶ್ವವಿದ್ಯಾನಿಲಯದ ಪುರುಷರ ಹಾಸ್ಟೆಲ್‍ನಲ್ಲಿಯೂ ಪೊಲೀಸರು ಮಾಹಿತಿ ಪರಿಶೀಲಿಸಿದರು. ಪೊಲೀಸರ ಪ್ರಕಾರ, ಇದಾದ ನಂತರ ವಿದ್ಯಾ ಎರ್ನಾಕುಳಂನಿಂದ ಕೋಯಿಕ್ಕೋಡ್ ಜಿಲ್ಲೆಗೆ ಪ್ರವೇಶಿಸಿದ್ದಾಳೆ.
ವಿದ್ಯಾ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪತ್ತಿರಿಪಾಲ ಸÀರ್ಕಾರಿ ಕಾಲೇಜಿನ ಸಂದರ್ಶನ ಸಮಿತಿ ಸದಸ್ಯರ ಹೇಳಿಕೆಯನ್ನು ಇಂದು ಪೊಲೀಸರು ದಾಖಲಿಸಿಕೊ|ಂಡಿದ್ದಾರೆ. ತ್ರಿಶೂರ್ ಕಾಲೇಜು ಶಿಕ್ಷಣ ಉಪನಿರ್ದೇಶಕರ ಕಚೇರಿಯ ಆಡಳಿತಾಧಿಕಾರಿ ಇಂದು ಅಟ್ಟಪ್ಪಾಡಿ ಸರ್ಕಾರಿ ಕಾಲೇಜು ಪ್ರಾಂಶುಪಾಲರು ಮತ್ತು ಸಂದರ್ಶನ ಮಂಡಳಿ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡರು. ಆದರೆ ಪೆÇಲೀಸರ ತನಿಖೆಯೇ ಪ್ರಹಸನವಾಗಿದ್ದು, ವಿದ್ಯಾಗೆ ಪೆÇಲೀಸರು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ನಿನ್ನೆ ವಿದ್ಯಾ ಅಟ್ಟಪಾಡಿ ಕಾಲೇಜಿಗೆ ಎಸ್‍ಎಫ್‍ಐನ ಪ್ರಮುಖ ನಾಯಕರೊಬ್ಬರ ಸಂದರ್ಶನಕ್ಕೆ ಬಂದಿದ್ದರು ಎಂಬ ಮಾಹಿತಿ ಹೊರಬಿದ್ದಿತ್ತು. ಇದರ ಸಿಸಿಟಿವಿ ದೃಶ್ಯಾವಳಿ ಪೆÇಲೀಸರಿಗೆ ಸಿಕ್ಕಿದೆ ಎಂದು ವರದಿಯಾಗಿದೆ.


