ಸಮರಸ ಚಿತ್ರಸುದ್ದಿ: ಕಾಸರಗೋಡು ಜಿಲ್ಲಾ ಕಾಂಗ್ರೆಸ್(ಡಿಸಿಸಿ) ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ನೇತಾರ ಕೆ. ವೆಳ್ತಂಬು ಅವರ 7ನೇ ಪುಣ್ಯತಿಥಿಯ ಅಂಗವಾಗಿ ಶನಿವಾರ ಡಿಸಿಸಿ ಕಚೇರಿಯಲ್ಲಿ ಪುಷ್ಪ ನಮನ ಮೂಲಕ ಸಂಸ್ಮರಣೆ ನಡೆಸಲಾಯಿತು. ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್ ಪುಷ್ಪಾರ್ಚನೆ ನಡೆಸಿದರು. ಕೆಪಿಸಿಸಿ ಪದಾಧಿಕಾರಿಗಳಾದ ಕೆ. ನೀಲಕಂಠನ್, ಪಿ.ಎ.ಅಶ್ರಫಲಿ, ಸೇವಾದಳದ ರಾಜ್ಯಾಧ್ಯಕ್ಷ ರಮೇಶ ಕರುವಾಚೇರಿ, ಕರುಣ್ ಥಾಪ ಮುಂತಾದವರು ಉಪಸ್ಥಿತರಿದರು.


