ನವದೆಹಲಿ (PTI): 'ಕಳೆದ ವರ್ಷ ಅಮೆರಿಕ ವಿತರಿಸಿದ ಪ್ರತಿ 5 ವಿದ್ಯಾರ್ಥಿ ವೀಸಾಗಳಲ್ಲಿ ಒಂದು ವೀಸಾವನ್ನು ಭಾರತಕ್ಕೆ ನೀಡಲಾಗಿದೆ. ಇದು ಭಾರತದ ಜನಸಂಖ್ಯೆಗೆ ಅನುಗುಣವಾಗಿ ನೀಡಬೇಕಾಗಿದ್ದ ಸಂಖ್ಯೆಗಿಂತಲೂ ಬಹಳ ಹೆಚ್ಚು' ಎಂದು ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಬುಧವಾರ ಹೇಳಿದ್ದಾರೆ.
0
samarasasudhi
ಜೂನ್ 07, 2023
ನವದೆಹಲಿ (PTI): 'ಕಳೆದ ವರ್ಷ ಅಮೆರಿಕ ವಿತರಿಸಿದ ಪ್ರತಿ 5 ವಿದ್ಯಾರ್ಥಿ ವೀಸಾಗಳಲ್ಲಿ ಒಂದು ವೀಸಾವನ್ನು ಭಾರತಕ್ಕೆ ನೀಡಲಾಗಿದೆ. ಇದು ಭಾರತದ ಜನಸಂಖ್ಯೆಗೆ ಅನುಗುಣವಾಗಿ ನೀಡಬೇಕಾಗಿದ್ದ ಸಂಖ್ಯೆಗಿಂತಲೂ ಬಹಳ ಹೆಚ್ಚು' ಎಂದು ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಬುಧವಾರ ಹೇಳಿದ್ದಾರೆ.
ಅಮೆರಿಕದ ರಾಯಭಾರ ಕಚೇರಿಯು ಬುಧವಾರ ನವದೆಹಲಿಯಲ್ಲಿ ಆಯೋಜಿಸಿದ್ದ ಏಳನೇ ವಾರ್ಷಿಕ ವಿದ್ಯಾರ್ಥಿ ವೀಸಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಿಂದ ಅಮೆರಿಕಕ್ಕೆ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು. ಜುಲೈ ಮತ್ತು ಆಗಸ್ಟ್‌ನಲ್ಲಿ ಹತ್ತು ಸಾವಿರ ವಿದ್ಯಾರ್ಥಿ ವೀಸಾಗಳನ್ನು ಬಿಡುಗಡೆ ಮಾಡುತ್ತೇವೆ' ಎಂದು ಅವರು ತಿಳಿಸಿದರು.
ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು ಹಂಚಿಕೊಂಡ ಮಾಹಿತಿಯ ಪ್ರಕಾರ, ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯು 1,25,000ಕ್ಕೂ ಹೆಚ್ಚಿನ ವಿದ್ಯಾರ್ಥಿ ವೀಸಾಗಳನ್ನು ನೀಡಿದೆ. ಇದು ದಾಖಲೆ ಸಂಖ್ಯೆಯಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತೀಯರಿಗೆ 2022ರಲ್ಲಿ ಹೆಚ್ಚು ವೀಸಾಗಳನ್ನು ನೀಡಲಾಗಿದೆ. ಒಟ್ಟು ಉದ್ಯೋಗ ವೀಸಾಗಳಲ್ಲಿ ಶೇ 65ರಷ್ಟು ಮತ್ತು ವಿದ್ಯಾರ್ಥಿ ವೀಸಾಗಳಲ್ಲಿ ಶೇ 17.5ರಷ್ಟನ್ನು ಭಾರತೀಯರಿಗೆ ನೀಡಲಾಗಿದೆ. ಕಳೆದ ವರ್ಷ ಅಮೆರಿಕಕ್ಕೆ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಭಾರತೀಯರು ಭೇಟಿ ನೀಡಿದ್ದಾರೆ.