HEALTH TIPS

ಇನ್ನು ಹಾಡು ಕೇಳುತ್ತ ಸ್ನಾನ ಮಾಡಲ್ಲ ಎಂದು ಕ್ಷಮೆ ಕೋರಿದ ವಿದ್ಯಾರ್ಥಿನಿ!; ದಯವಿಟ್ಟು ಫೋನ್​ ಹಿಂದಿರುಗಿಸಿ ಎಂದು ಮನವಿ

               ಕೊಚ್ಚಿ: ಗಾಯಕರಲ್ಲದವರೂ ಸ್ನಾನದ ಕೋಣೆಯಲ್ಲಿರುವಾಗ ತಮ್ಮ ಮನಸಿಗೆ ತೋಚಿದ ಹಾಡನ್ನು ಗುನುಗುತ್ತಿರುತ್ತಾರೆ. ಆದರೆ ಇಲ್ಲೊಬ್ಬಳು ವಿದ್ಯಾರ್ಥಿನಿಯ ಪಾಲಿಗೆ ಬಾತ್​ರೂಮ್​ನಲ್ಲಿ ಹಾಡು ಕೇಳಿದ್ದೇ ಮುಳುವಾಗಿ ಪರಿಣಮಿಸಿದೆ. ಇಂಥದ್ದೊಂದು ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.

             ಕೇರಳದ ಅಮಲ್​ ಜ್ಯೋತಿ ಕಾಲೇಜ್ ಆಫ್ ಇಂಜಿನಿಯರಿಂಗ್​ನ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್​ ಬಾತ್​ರೂಮ್​ನಲ್ಲಿ ಹಾಡು ಕೇಳುತ್ತ ಸ್ನಾನ ಮಾಡಿದ್ದಕ್ಕೆ ತನ್ನ ಸ್ಮಾರ್ಟ್​ಫೋನ್ ಕಳೆದುಕೊಳ್ಳುವಂತಾಗಿದೆ. ಮಾತ್ರವಲ್ಲ ಕ್ಷಮಾಪಣಾ ಪತ್ರವನ್ನೂ ಬರೆಯುವಂತಾಗಿದೆ.   


              ಇಂಥದ್ದೊಂದು ವಿಷಯ ಕುರಿತ ವಿಡಿಯೋ ರೆಡ್ಡಿಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹಾಸ್ಟೆಲ್​ನಲ್ಲಿ ಸ್ಮಾರ್ಟ್​ಫೋನ್​ನಿಂದ ಸಂಗೀತ ಕೇಳುತ್ತ ಸ್ನಾನ ಮಾಡಿದ್ದಕ್ಕೆ ಅಲ್ಲಿನ ಆಡಳಿತ ಮಂಡಳಿ ಆಕೆಯ ಫೋನ್ ಕಿತ್ತುಕೊಂಡಿದೆ. 'ನಾನು ಹಾಡು ಕೇಳುತ್ತ ಸ್ನಾನ ಮಾಡಿದ್ದಕ್ಕೆ ಕ್ಷಮೆ ಕೇಳುತ್ತಿದ್ದೇನೆ. ಇನ್ನು ಮುಂದೆ ಅಂಥ ತಪ್ಪು ಮಾಡಲ್ಲ. ದಯವಿಟ್ಟು ನನ್ನ ಸ್ಮಾರ್ಟ್​ಫೋನ್ ಹಿಂದಿರುಗಿಸಿ, ನನಗೆ ಬಹುಮುಖ್ಯವಾದ ಕೆಲಸ ಇದೆ, ಪ್ರಾಜೆಕ್ಟ್ ವರ್ಕ್​ ಪೂರ್ಣಗೊಳಿಸಬೇಕು' ಎಂದು ಕ್ಷಮಾಪಣಾ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾಳೆ. ಅಂದಹಾಗೆ ಇದು ಕೆಲವು ತಿಂಗಳ ಹಿಂದೆ ನಡೆದ ಹಳೆಯ ಘಟನೆಯಾದರೂ ಈಗ ವೈರಲ್ ಆಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries