ತಿರುವನಂತಪುರಂ: ಕೈಟ್ ಅಭಿವೃದ್ಧಿಪಡಿಸಿದ ಸಂಪೂರ್ಣ ಶಾಲಾ ನಿರ್ವಹಣೆ ಮೊಬೈಲ್ ಆ್ಯಪ್ ಅನ್ನು ಶಿಕ್ಷಣ ಸಚಿವ ವಿ ಶಿವನ್ ಕುಟ್ಟಿ ಉದ್ಘಾಟಿಸಿದರು.
ಶಿಕ್ಷಕರಿಗೆ ಹಾಗೂ ಪೋಷಕರಿಗೆ ಮಾಹಿತಿ ಲಭ್ಯವಾಗಲಿದೆ. ಹಾಜರಾತಿ ಮತ್ತು ಪ್ರಗತಿ ವರದಿಗಳು ಜನರಿಗೆ ತಿಳಿಯಲು ಇದು ನೆರವಾಗಲಿದೆ. ಶಿಕ್ಷಕರು ಮತ್ತು ಪೋಷಕರಿಗೆ ಪ್ರತ್ಯೇಕ ಲಾಗಿನ್ ಐಡಿ ನೀಡಲಾಗುವುದು. ಮಕ್ಕಳ ಮಾಹಿತಿ ಸುರಕ್ಷಿತವಾಗಿರುತ್ತದೆ. ಇತರ ಸಾಫ್ಟ್‍ವೇರ್ ಗ|ಳನ್ನು ಶಾಲೆಗಳು ಬಳಸುವಂತಿಲ್ಲ. ಅಗತ್ಯವಿದ್ದರೆ, ವಿಶೇಷ ಅನುಮತಿ ಅಗತ್ಯವಿದೆ. ಸಂಪೂರ್ಣ ಅಪ್ಲಿಕೇಶನ್ ಪ್ಲೇ ಸ್ಟೋರ್‍ನಲ್ಲಿ ಲಭ್ಯವಿರುತ್ತದೆ.


