ಶ್ರೀನಗರ : ಹರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್ ಅವರ ಗೃಹಬಂಧನವು 200 ವಾರಗಳನ್ನು ದಾಟಿದ್ದು, ಅವರನ್ನು ಶೀಘ್ರ ಬಿಡುಗಡೆಗೊಳಿಸಬೇಕೆಂದು ಅಂಜುಮನ್ ಔಕಾಫ್ ಜಾಮಿಯಾ ಮಸೀದಿಯ ಆಡಳಿತ ಮಂಡಳಿ ಶುಕ್ರವಾರ ಆಗ್ರಹಿಸಿದೆ.
0
samarasasudhi
ಜೂನ್ 23, 2023
ಶ್ರೀನಗರ : ಹರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್ ಅವರ ಗೃಹಬಂಧನವು 200 ವಾರಗಳನ್ನು ದಾಟಿದ್ದು, ಅವರನ್ನು ಶೀಘ್ರ ಬಿಡುಗಡೆಗೊಳಿಸಬೇಕೆಂದು ಅಂಜುಮನ್ ಔಕಾಫ್ ಜಾಮಿಯಾ ಮಸೀದಿಯ ಆಡಳಿತ ಮಂಡಳಿ ಶುಕ್ರವಾರ ಆಗ್ರಹಿಸಿದೆ.
'ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸದಂತೆ ಮಿರ್ವೈಜ್ ಅವರನ್ನು ಅಧಿಕಾರಿಗಳು ತಡೆದು 200 ಶುಕ್ರವಾರಗಳು ಕಳೆದಿವೆ. ಇದು ನಾಚಿಕೆಗೇಡು' ಎಂದೂ ಹೇಳಿಕೆಯಲ್ಲಿ ತಿಳಿಸಿದೆ.
ಮಿರ್ವೈಜ್ ಅವರು ಕಾಶ್ಮೀರದ ಮುಖ್ಯ ಧರ್ಮಗುರುವಾಗಿದ್ದಾರೆ. ಕೇಂದ್ರ ಸರ್ಕಾರವು 2019ರ ಆಗಸ್ಟ್ 4ರಿಂದಲೂ ಮಿರ್ವೈಜ್ ಅವರನ್ನು ಗೃಹಬಂಧನದಲ್ಲಿರಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಈ ಕ್ರಮಕೈಗೊಂಡಿತ್ತು.
ಮಿರ್ವೈಜ್ ಅವರ ಬಿಡುಗಡೆಗೆ ಒತ್ತಾಯಿಸಿ ಜಾಮಿಯಾ ಮಸೀದಿ ಬಳಿ ಶುಕ್ರವಾರ ಪ್ರತಿಭಟನೆ ನಡೆದಿದೆ.