HEALTH TIPS

ಹೃದಯಾಘಾತಕ್ಕೀಡಾಗಿ ಎಂಟು ತಿಂಗಳ ಮಗು ಸಾವು; ಆರೋಗ್ಯ ಸಚಿವರಿಗೆ ದೂರು

            ಕೊಟ್ಟಾಯಂ: ದೇಶಾದ್ಯಂತ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದ್ದು, ಅದರಿಂದ ಸಾಯುವವರ ಸಂಖ್ಯೆಯೂ ಅಧಿಕವಾಗಿದೆ. ಎಂಟು ತಿಂಗಳ ಮಗು ಕೂಡ ಹೃದಯಾಘಾತದಿಂದ ಸಾವಿಗೀಡಾದ ಪ್ರಕರಣ ವರದಿಯಾಗಿದ್ದು, ಆ ಸಂಬಂಧ ಆರೋಗ್ಯ ಸಚಿವರಿಗೂ ದೂರು ಸಲ್ಲಿಕೆ ಆಗಿದೆ.

           ಕೇರಳದ ಮನಾರ್ಕಾಡ್​ನ ಪಥಝಕುಝಿಯ ಸ್ಥಳೀಯ ನಿವಾಸಿ ಎಬಿ-ಜಾನ್ಸಿ ದಂಪತಿಯ ಪುತ್ರ ಜೋಶ್​ ಸಾವಿಗೀಡಾದ ಮಗು. ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದಲ್ಲಿ ಈ ಪ್ರಕರಣ ನಡೆದಿದೆ. ಜ್ವರದಿಂದ ಬಳಲುತ್ತಿದ್ದ ಈ ಮಗುವನ್ನು ಮೇ 11ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

            ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಮಗುವಿನ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದರಿಂದ ಮೇ 29ರಂದು ಐಸಿಯುಗೆ ದಾಖಲಿಸಲಾಗಿತ್ತು. ಚುಚ್ಚುಮದ್ದು ನೀಡುವುದರಿಂದ ಮಗುವಿಗೆ ಹೃದಯಾಘಾತ ಉಂಟಾಗುವ ಅಪಾಯವಿದೆ ಎಂದು ಗೊತ್ತಿದ್ದರೂ ಅದಕ್ಕೆ ಹೆಚ್ಚಿನ ತೀವ್ರತೆಯ ಇಂಜೆಕ್ಷನ್ ನೀಡಲಾಗಿದೆ. ಆ ಬಳಿಕ ಸೂಕ್ತ ಗಮನ ಹರಿಸದ್ದರಿಂದ ಮಗು ಉಸಿರಾಟದ ಸಮಸ್ಯೆಗೆ ಒಳಗಾಗಿ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಗುವಿನ ಕುಟುಂಬಸ್ಥರು ಅಲ್ಲಿನ ಆರೋಗ್ಯ ಸಚಿವರಿಗೂ ದೂರು ನೀಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries