ತಿರುವನಂತಪುರಂ: ಮೊನ್ಸನ್ ಮಾವುಂಗಲ್ ಪ್ರಾಚ್ಯವಸ್ತು ಹಗರಣ ಪ್ರಕರಣದಲ್ಲಿ ಕೇರಳ ಸರ್ಕಾರ ಎರಡನೇ ಆರೋಪಿಯನ್ನಾಗಿಸಿರುವ ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಬಂಧನಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಸುಧಾಕರನ್ ಅವರನ್ನು ಇದೇ 21ರವರೆಗೆ ಬಂಧಿಸಬಾರದು ಎಂದು ಹೈಕೋರ್ಟ್ ಸೂಚಿಸಿದೆ. ಸುಧಾಕರನ್ ಅವರ ಅರ್ಜಿಯ ವಿಚಾರಣೆ ಬುಧವಾರ ನಡೆಯಲಿದೆ.
ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ಯಾರಿಗೂ ಮೋಸ ಮಾಡಿಲ್ಲ ಎಂದು ಸುಧಾಕರನ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಇದೇ ತಿಂಗಳ 23ರಂದು ವಿಚಾರಣೆಗೆ ಹಾಜರಾಗುವಂತೆ ಸುಧಾಕರನ್‍ಗೆ ಅಪರಾಧ ವಿಭಾಗದ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಮೊನ್ಸನ್ ಮಾವುಂಕಲ್ ಮೊದಲ ಆರೋಪಿಯಾಗಿರುವ ಪ್ರಕರಣದಲ್ಲಿ ಮಾಜಿ ಐಜಿ ಜಿ.ಲಕ್ಷ್ಮಣ್ ಮತ್ತು ಮಾಜಿ ಡಿಐಜಿ ಎಸ್.ಸುರೇಂದ್ರನ್ ಇತರ ಆರೋಪಿಗಳಾಗಿದ್ದಾರೆ.


