ಕಣ್ಣೂರು: ಆನೆ ಸವಾರಿ ಮಾಡುವ ತಾಯಿಯ ಆಸೆಯನ್ನು ಪುತ್ರ ಅಚ್ಚರಿಗೊಳಿಸುವ ರೀತಿ ಈಡೇರಿಸಿ ಗಮನ ಸೆಳೆದಿದ್ದಾನೆ. ಸ್ವಂತ ಮನೆಯಂಗಳದಲ್ಲಿ ಆನೆತಂದು ಕಟ್ಟಿಹಾಕಿ ತಾಯಿಯ ಆಸೆಯನ್ನು ಈಡೇರಿಸಿದ ಕೃತಾರ್ಥತೆ ಈ ಪುತ್ರನದು.
ಕಣ್ಣೂರಿನ ಉರುವಾಚಲ ಕೀಳೀಕ್ಕಾಲ್ ಎಂಬಲ್ಲಿ ಈ ಘಟನೆ ನಡೆದಿದೆ. ಟಾಟಾ ಫೈನಾನ್ಸ್ ನ ಉದ್ಯೋಗಿ ಸಂಜು, ತನ್ನ ತಾಯಿ ಸರಸ್ವತಿಗಾಗಿ ಮನೆ ಅಂಗಳದಲ್ಲಿ ಆನೆ ಕಟ್ಟಿದ್ದಾರೆ. ಲಕ್ಷ ವೆಚ್ಚದಲ್ಲಿ ತಯಾರಾದ ಆನೆಗೆ ಶಿವನ್ ಕುಟ್ಟಿ ಎಂದು ಹೆಸರಿಡಲಾಗಿದೆ. ಸಂಜು ಅವರೇ ತಮ್ಮ ತಾಯಿಗೆ ಆನೆಯ ಪ್ರತಿಮೆಯನ್ನು ಮಾಡಿಸಿದ್ದಾರೆ.
ಶಿಲ್ಪಗಳನ್ನು ಮಾಡುವುದರ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ತನ್ನ ತಾಯಿಯ ಆಸೆಯನ್ನು ಪೂರೈಸಿದ ಸಂಭ್ರಮದಲ್ಲಿ ಸಂಜು ಇದ್ದಾರೆ. ತಾಯಿ ಸರಸ್ವತಿ ಆನೆಯ ಮೇಲೆ ಏರಿ ತನ್ನ ಆಸೆಯನ್ನು ಈಡೇರಿಸಿದ ಖುಷಿಯಲ್ಲಿದ್ದಾಳೆ. ಮನೆಗೆ ಬೆನ್ನುಹಾಕಿ ನಿಂತಿರುವ ಗಜವೀರ ಶಿವನ್Àಕುಟ್ಟಿ ನಿರ್ಮಿಸಲಾಗಿದ್ದು, ಆನೆಗೂ ಈಗ ಅಭಿಮಾನಿಗಳಿದ್ದಾರೆ. ದಿನವೂ ಕೆಲಸ ಮುಗಿಸಿ ಮನೆಗೆ ಬರುವಾಗ ಸಂಜು ಆನೆ ತಯಾರಿಯಲ್ಲಿ ತೊಡಗುತ್ತಿದ್ದರು. ಬೆಳಗಿನ ಜಾವ ಮೂರರವರೆಗೂ ಶಿಲ್ಪ ಕೆಲಸ ಮಾಡುತ್ತಿದ್ದ ಎಂದ|ಊ ಸರಸ್ವತಿ ಹೇಳಿದ್ದಾರೆ.
ತಂತಿಗಳನ್ನು ಬಗ್ಗಿಸಿ ಕಟ್ಟುವ ಮೂಲಕ ಆನೆಯ ಆಕಾರವನ್ನು ಮೊದಲು ರಚಿಸಲಾಗಿದೆ. ನಂತರ ಸಿಮೆಂಟ್ ಮತ್ತು ತಂತಿ ಬಳಸಿ ಕಾಂಕ್ರೀಟ್‍ನಿಂದ ಕಾಲು, ದೇಹ ಮತ್ತು ಸೊಂಡಿಲು ಸಿದ್ಧಪಡಿಸಲಾಯಿತು. ಪೇಂಟಿಂಗ್ ಕೆಲಸ ಮುಗಿದಾಗ ಜೀವಂತ ಆನೆ ಹಿತ್ತಲಲ್ಲಿ ತಲೆ ಎತ್ತಿ ನಿಂತಿತ್ತು. ಮೂರು ತಿಂಗಳ ಪರಿಶ್ರಮದ ನಂತರ ಶಿವನ್Àಕುಟ್ಟಿ ನಿರ್ಮಾಣ ಪೂರ್ಣಗೊಂಡಿತು. ಇದೀಗ ಆನೆ ಮುಖಕ್ಕೆ ವರ್ಣಾಲಕಾರ ಸಿದ್ಧಗೊಳಿಸುವ ಪ್ರಯತ್ನದಲ್ಲಿದ್ದಾರೆ.




.jpg)
