ತಿರುವನಂತಪುರ: ಮಲಯಾಳಂ ಸಿನಿಮಾ ನಿರ್ದೇಶಕ ಮತ್ತು ಸಂಘ ಪರಿವಾರದ ಅನುಯಾಯಿ ರಾಮಸಿಂಹನ್ ಅಬೂಬಕ್ಕರ್ ಅವರು ಬಿಜೆಪಿ ತ್ಯಜಿಸುವುದಾಗಿ ಘೋಷಿಸಿದ್ದಾರೆ.
0
samarasasudhi
ಜೂನ್ 16, 2023
ತಿರುವನಂತಪುರ: ಮಲಯಾಳಂ ಸಿನಿಮಾ ನಿರ್ದೇಶಕ ಮತ್ತು ಸಂಘ ಪರಿವಾರದ ಅನುಯಾಯಿ ರಾಮಸಿಂಹನ್ ಅಬೂಬಕ್ಕರ್ ಅವರು ಬಿಜೆಪಿ ತ್ಯಜಿಸುವುದಾಗಿ ಘೋಷಿಸಿದ್ದಾರೆ.
2021ರ ಡಿಸೆಂಬರ್‌ನಲ್ಲಿ ಇಸ್ಲಾಂ ತೊರೆದು, ಆಲಿ ಅಕ್ಬರ್ ಎಂದಿದ್ದ ತಮ್ಮ ಹೆಸರನ್ನು ರಾಮಸಿಂಹನ್ ಅಬೂಬಕ್ಕರ್ ಎಂದು ಬದಲಿಸಿಕೊಂಡಿದ್ದರು.
ಪಕ್ಷ ತ್ಯಜಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, 'ತಮ್ಮ ನಿರ್ಧಾರದ ಬಗ್ಗೆ ಗೊಂದಲ ಸೃಷ್ಟಿಸುವ ಅಗತ್ಯ ಇಲ್ಲ. ಇನ್ಮುಂದೆ ಎಲ್ಲಿಗೂ ಹೋಗುವುದಿಲ್ಲ, ಧರ್ಮದ (ಸನಾತನ ಧರ್ಮ) ಅನುಸಾರ ನಡೆಯುತ್ತೇನೆ' ಎಂದು ಹೇಳಿದ್ದಾರೆ.
ಗುರುವಾರ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, 'ಎಲ್ಲದರಿಂದ ಮುಕ್ತಿ ಪಡೆಯತ್ತಿದ್ದೇನೆ. ಧರ್ಮದ ಜೊತೆ ಮಾತ್ರ ಇರುತ್ತೇನೆ' ಎಂದು ಬರೆದುಕೊಂಡಿದ್ದರು.
ಇದಕ್ಕೂ ಮೊದಲು ಮಲಯಾಳಂ ನಿರ್ದೇಶಕ ರಾಜಸೇನನ್ ಮತ್ತು ನಟ ಭೀಮನ್ ರಾಘು ಅವರು ಬಿಜೆಪಿ ತೊರೆದಿದ್ದರು. ಈ ಬೆಳವಣಿಗೆಗಳ ಬಗ್ಗೆ ಕೇಸರಿ ಪಕ್ಷ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.