HEALTH TIPS

ಸೀಟ್ ಬೆಲ್ಟ್​ ಧರಿಸಿದ್ದರೂ ಚರ್ಚ್ ಪಾದ್ರಿಗೆ ಬಿತ್ತು ದಂಡ; ಕಾರಣ ಗೊತ್ತಾದ್ರೆ ನೀವೂ ಅಚ್ಚರಿಯಾಗ್ತೀರಾ!

           ಕೊಚ್ಚಿ: ರಸ್ತೆ ಬದಿ ಸಂಚಾರಿ ಪೊಲೀಸರು ವಾಹನ ಸವಾರರಿಗೆ ದಂಡ ವಿಧಿಸುವ ಸಂಪ್ರದಾಯ ನಿಧಾನವಾಗಿ ಕಡಿಮೆಯಾಗುತ್ತಿದೆ. ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಬಳಸಿಕೊಂಡು ಪ್ರಸ್ತುತ ದಿನಗಳಲ್ಲಿ ಸಂಚಾರಿ ನಿಯಮ ಮೀರಿದವರನ್ನು ಪತ್ತೆ ಮಾಡಲಾಗುತ್ತಿದೆ.

            ಇದಕ್ಕಾಗಿ ಸುಧಾರಿತ ಎಐ ಕ್ಯಾಮರಾಗಳನ್ನು ಪ್ರತಿ ರಸ್ತೆಯಲ್ಲೂ ಪೊಲೀಸರು ಅಳವಡಿಸಿರುವುದನ್ನು ಬಹುತೇಕರು ಗಮನಿಸಿರುತ್ತೀರಿ. ಇದೀಗ ಈ ಕ್ಯಾಮರಾದಿಂದ ಇಲ್ಲೊಂದು ಕಡೆ ಎಡವಟ್ಟಾಗಿದ್ದು, ಚರ್ಚ್ ಪಾದ್ರಿಯೊಬ್ಬರಿಗೆ ದಂಡ ಕಟ್ಟುವಂತೆ ನೊಟೀಸ್ ಜಾರಿಯಾಗಿದೆ.

              ಕಳೆದ ಬುಧವಾರ ಚರ್ಚ್​ ಪಾದ್ರಿ ಫಾ.ಸುನಿಲ್ ತಮ್ಮ ತಂದೆ-ತಾಯಿಯನ್ನು ಭೇಟಿಯಾಗಲೆಂದು ಚೆಂಗನ್ನೂರು-ನಾಗಂಪಾಡಂ ರಸ್ತೆಯ ಮೂಲಕ ಕಕ್ಕುಡು ಎಂಬಲ್ಲಿಗೆ ತೆರಳಿದ್ದರು. ಈ ವೇಳೆ ಅವರ ಉದ್ದನೆಯ ಗಡ್ಡ, ಸೀಟ್ ಬೆಲ್ಟ್ ಧರಿಸಿದ್ದನ್ನು ಮರೆಮಾಚಿದೆ. ಎಐ ಕ್ಯಾಮರಾ ಪಾದ್ರಿ ಫಾ.ಸುನಿಲ್ ಸೀಲ್ಟ್ ಬೆಲ್ಟ್ ಧರಿಸಿಲ್ಲ ಎಂದು ದಂಡ ವಿಧಿಸಿದೆ.

                 ಎರಡು ದಿನಗಳ ಬಳಿಕ ಸೀಟ್‌ ಬೆಲ್ಟ್ ಧರಿಸದಿದ್ದಕ್ಕಾಗಿ 500 ರೂ. ದಂಡ ಪಾವತಿಸುವಂತೆ ಫಾ.ಸುನಿಲ್ ಮೊಬೈಲ್​ಗೆ ಮೆಸೇಜ್ ಬಂದಿದೆ. ದಂಡದ ನೊಟೀಸ್​ನಲ್ಲಿ ಲಗತ್ತಿಸಲಾಗಿದ್ದ ಫೋಟೋವನ್ನು ಸ್ಪಷ್ಟವಾಗಿ ಗಮನಿಸಿದಾಗ ಸೀಟ್‌ ಬೆಲ್ಟ್ ಧರಿಸಿದ್ದು, ಅದು ಉದ್ದನೆಯ ಗಡ್ಡದಿಂದ ಕಾಣದಾಗಿದೆ ಎಂಬುದು ಗೊತ್ತಾಗಿದೆ. ಬಳಿಕ ಪಾದ್ರಿ ಫಾ.ಸುನಿಲ್ ಕಾಕ್ಕನಾಡು ವ್ಯಾಪ್ತಿಯ ಆರ್‌ಟಿಒ ಕಚೇರಿಗೆ ಭೇಟಿ ನೀಡಿ ಸ್ಪಷ್ಟನೆ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries