HEALTH TIPS

ಒಂದೇ ಸ್ಥಳದಲ್ಲಿ ಮೂರು ರೈಲುಗಳ ಅಪಘಾತ ಸಂಭವಿಸಿದ್ದು ಹೇಗೆ? ಆ ಕರಾಳ ಸಂಜೆ ಆಗಿದ್ದೇನು?

                 ಭುವನೇಶ್ವರ್: ಒಡಿಶಾದ ಬಾಲಸೋರ್‌ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣ ಬಳಿ ಮೂರು ರೈಲುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 238ಕ್ಕೆ ಏರಿದೆ. 900 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

                           ಹೇಗೆ ಒಂದೇ ಸ್ಥಳದಲ್ಲಿ ಈ ಮೂರು ರೈಲುಗಳ ಅಪಘಾತ ನಡೆಯಿತು?ಎಂದು ಬಹುತೇಕರಿಗೆ ಪ್ರಶ್ನೆಗಳು ಕಾಡುತ್ತಿವೆ.

           ಸದ್ಯದ ಪ್ರಾಥಮಿಕ ಮಾಹಿತಿ ಪ್ರಕಾರ ಈ ಕೆಳಗಿನಂತೆ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ.

  •                ಬೆಂಗಳೂರಿನಿಂದ (ಬೈಯಪ್ಪನಹಳ್ಳಿ ರೈಲು ನಿಲ್ದಾಣದಿಂದ) ಪಶ್ಚಿಮ ಬಂಗಾಳದ ಹೌರಾಕ್ಕೆ, ತಿರುಪತಿ ಮಾರ್ಗವಾಗಿ ಶುಕ್ರವಾರ ಬೆಳಿಗ್ಗೆ 10:35 ಕ್ಕೆ ಹೊರಟಿದ್ದ ಹೌರಾ-ಬೆಂಗಳೂರು ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ- 12864) ಶುಕ್ರವಾರ ಸಂಜೆ 7.10 ರ ಸುಮಾರು ಒಡಿಶಾದ ಬಹನಾಗ ರೈಲು ನಿಲ್ದಾಣದ ಬಳಿ ಹಳ್ಳಿ ತಪ್ಪಿದೆ. ಇದರಿಂದ ರೈಲಿನ ಹಲವು ಬೋಗಿಗಳು ಉರುಳಿ ಪಕ್ಕದ ಟ್ರ್ಯಾಕ್‌ಗೆ ಬಿದ್ದಿವೆ.

  •                                ಪಶ್ಚಿಮ ಬಂಗಾಳದ ಕೋಲ್ಕತ್ತ ಬಳಿಯ ಶಾಲಿಮಾರ್ ರೈಲು        ನಿಲ್ದಾಣದಿಂದ (ರೈಲು ಸಂಖ್ಯೆ-12841) ಶುಕ್ರವಾರ ಮಧ್ಯಾಹ್ನ 3.15 ಕ್ಕೆ ಚೆನ್ನೈಗೆ ಹೊರಟಿದ್ದ 'ಶಾಲಿಮಾರ್ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು' ಶರವೇಗದಲ್ಲಿ ಬಂದು ಬಹನಾಗಾ ರೈಲು ನಿಲ್ದಾಣ ಬಳಿ ಅದಾಗಲೇ ಹಳಿ ತಪ್ಪಿ ಬಿದ್ದಿದ್ದ ಹೌರಾ- ಬೆಂಗಳೂರು ರೈಲು ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಈ ಘಟನೆ ಶುಕ್ರವಾರ ಸಂಜೆ 7:20ರ ಸುಮಾರು ನಡೆದಿದೆ.

  •                ಕೋರಮಂಡಲ್ ರೈಲಿನ ಡಿಕ್ಕಿಯ ರಭಸಕ್ಕೆ ಆ ರೈಲಿನ ಬೋಗಿಗಳು ಪಕ್ಕದ ಹಳಿಯಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಅಪ್ಪಳಿಸಿವೆ.

  •               ಕೇವಲ 10 ನಿಮಿಷದ ಅಂತರದಲ್ಲಿ ಭೀಕರ ದುರಂತವೊಂದು ನಡೆದಿದು ಹೋಗಿದೆ. ಇದರಿಂದ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡು, ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

  •                   ಮಾರ್ಗದಲ್ಲಿ ಹಳಿ ತಪ್ಪಿದ್ದರೂ ಅದೇ ಮಾರ್ಗದಲ್ಲಿ ಹೇಗೆ ಮತ್ತೊಂದು ರೈಲು ಬಂತು? ಆ ಭಾಗದ ರೈಲ್ವೆ ಸಿಬ್ಬಂದಿ ಹೇಗೆ ಕೋರಮಂಡಲ್ ರೈಲು ಹೋಗಲು ಬಿಟ್ಟರು? ಎಂದು ಅನೇಕರಲ್ಲಿ ಪ್ರಶ್ನೆಗಳು ಮೂಡುತ್ತಿವೆ. ಇದಕ್ಕೆ ರೈಲ್ವೆ ಇಲಾಖೆಯೇ ಸೂಕ್ತ ತನಿಖೆ ನಡೆಸಿ ಉತ್ತರ ನೀಡಬೇಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries