ಕಣ್ಣೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ವರ್ಷ ಹಜ್ ನೀತಿಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ ಎಂದು ಹಜ್ ಸಮಿತಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಎ.ಪಿ.ಅಬ್ದುಲ್ಲಕುಟ್ಟಿ ಹೇಳಿದರು.
ಹಜ್ ಸಮಿತಿಯ ಅಧ್ಯಕ್ಷನಾಗಿ ಕೇರಳದ ಎಲ್ಲಾ ಮೂರು ವಿಮಾನ ನಿಲ್ದಾಣಗಳಲ್ಲಿ ವಿವಿ|ಧ ಕ್ರಮಗಳನ್ನು ತರಲು ನನಗೆ ಸಂತೋಷ ಮತ್ತು ಹೆಮ್ಮೆಯಿದೆ ಎಂದು ಅಬ್ದುಲ್ಲಕುಟ್ಟಿ ಹೇಳಿದರು.
ಹಜ್ ನೀತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಹಜ್ ನೋಂದಣಿ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಹಜ್ ನೋಂದಣಿ ಶುಲ್ಕ 300 ರೂ.ಇತ್ತು. ಇದು ಸಂಪೂರ್ಣವಾಗಿ ಉಚಿತವಾಗಿದೆ. ಇದು ಅಲ್ಲಾಹನ ಮುಂದೆ ಎಲ್ಲರೂ ಸಮಾನರು ಎಂಬ ಉಜ್ವಲ ಸಂದೇಶವನ್ನು ನೀಡುತ್ತದೆ. ಖಾಸಗಿ ಆಪರೇಟರ್‍ಗಳ ಭದ್ರಕೋಟೆಗೆ ಕಡಿವಾಣ ಬಿದ್ದಿದೆ. ಎಂ ಪಾಕಿರ್ಂಗ್ ಕೇಂದ್ರಗಳನ್ನು 10 ರಿಂದ 25 ಕ್ಕೆ ಹೆಚ್ಚಿಸಲಾಗಿದೆ. ಯಾತ್ರಾರ್ಥಿಗಳಿಗೆ ಕನಿಷ್ಠ ವೆಚ್ಚದಲ್ಲಿ ಹಜ್ ಯಾತ್ರೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅಬ್ದುಲ್ಲಕುಟ್ಟಿ ತಿಳಿಸಿದ್ದಾರೆ.
ರಾಜ್ಯದ ಮೊದಲ ಹಜ್ ಯಾತ್ರಿಕರ ತಂಡ ಕಣ್ಣೂರಿನಿಂದ ಹೊರಟಿತು. ಭಾನುವಾರ ನಸುಕಿನ 1.30ಕ್ಕೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಮೊದಲ ಹಜ್ ವಿಮಾನದ ಫ್ಲ್ಯಾಗ್‍ಆಫ್ ನೆರವೇರಿತು. ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನದಲ್ಲಿ 145 ಜನರ ಗುಂಪು ಜೆಡ್ಡಾಕ್ಕೆ ಹೊರಟಿದೆ.




