HEALTH TIPS

ಕಲಾಮಂಡಲಂ ನಲ್ಲಿ ಕಥಕ್ಕಳಿ ಕೋರ್ಸ್ ಗೆ ಇದೇ ಮೊದಲ ಬಾರಿಗೆ ಮುಸ್ಲಿಂ ಬಾಲಕಿ ಸೇರ್ಪಡೆ!

              ತ್ರಿಶೂರ್: 90 ವರ್ಷಗಳ ಇತಿಹಾಸವಿರುವ ಕೇರಳದ ಕಲಾಮಂಡಲಂ ನಲ್ಲಿ ಮುಸ್ಲಿಂ ಬಾಲಕಿಗೆ ಪ್ರವೇಶ ನೀಡಲಾಗಿದೆ. ತ್ರಿಶೂರ್ ಮೂಲದ ಪ್ರತಿಷ್ಠಿತ ಸಂಸ್ಥೆಯಲ್ಲಿ ಮೊದಲ ಬಾರಿಗೆ ಕಥಕ್ಕಳಿ ಕೋರ್ಸ್‌ಗೆ ಮೊದಲ ಮುಸ್ಲಿಂ ವಿದ್ಯಾರ್ಥಿನಿ ದಾಖಲಾಗಿದ್ದಾರೆ.

               14 ವರ್ಷದ ಸಾಬ್ರಿ ಎನ್ ಚೆರುತುರುತಿ ದಾಖಲಾಗಿದ್ದು, ಹಿಜಾಬ್ ಧರಿಸಿಕೊಂಡೇ ನೃತ್ಯ ತರಬೇತಿ ಪಡೆದಳು. ಕಥಕ್ಕಳಿಯ ಹಿರಿಯ 86 ವರ್ಷದ ಕಲಾಮಂಡಲಂ ಗೋಪಿ ಆಸನ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

               ಸಾಬ್ರಿಗೆ ಕಥಕ್ಕಳಿಯಲ್ಲಿ ಒಲವು ಇತ್ತು. ಆಂಚಲ್‌ನ ಅಗಸ್ತ್ಯಕೋಡ್‌ನಲ್ಲಿರುವ ಮಹಾದೇವ ದೇವಸ್ಥಾನಕ್ಕೆ ನಿಯಮಿತವಾಗಿ ವಾಚನಗೋಷ್ಠಿಗಳನ್ನು ಆಯೋಜಿಸಲು ನನ್ನೊಂದಿಗೆ ಬರುತ್ತಿದ್ದಳು ಎಂದು ಅವರ ತಂದೆ ಎಸ್ ನಿಜಾಮ್ ಹೇಳಿದ್ದಾರೆ.

               ಪ್ರದರ್ಶನಗಳಿದ್ದಾಗ ಆಕೆ ನಿದ್ರಿಸುತ್ತಿರಲಿಲ್ಲ,  ನೃತ್ಯಗಾರರನ್ನು ಗಮನವಿರಿಸಿ ನೋಡುತ್ತಿದ್ದಳು. ಅವರ ಮೇಕಪ್ ಮತ್ತು ವರ್ಣರಂಜಿತ ಉಡುಪಿನಿಂದ ಆಕೆ ಪ್ರಭಾವಿತಳಾಗಿದ್ದಳು, ನಾನು ಅವಳಿಗೆ ನನ್ನ ಕಥಕ್ಕಳಿ ಪ್ರದರ್ಶನದ ಫೋಟೋಗಳನ್ನು ತೋರಿಸುತ್ತಿದ್ದೆ, ಇದರಿಂದ ಅವಳು ಅದರೆಡೆಗೆ ಮತ್ತಷ್ಟು ಆಕರ್ಷಿತಳಾದಳು ಎಂದು ಅಮ್ಮಾಶ್ ಆರ್ಟ್ ಗ್ಯಾಲರಿ ನಿರ್ವಹಿಸುವ ಫೋಟೋ ಗ್ರಾಫರ್ ನಿಜಾಮ್ ಹೇಳಿದ್ದಾರೆ.

                ಕಥಕ್ಕಳಿ ಅಭ್ಯಾಸಿಸಲು ಸಮುದಾಯದ ಪ್ರತಿರೋಧವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಿಜಾಮ್, ರಾಜ್ಯದ ದಕ್ಷಿಣ ಭಾಗದಲ್ಲಿ, ನಮ್ಮ ಸಮುದಾಯದ ಸದಸ್ಯರು ಕಲೆಯನ್ನು ಕಲೆಯನ್ನಾಗಿ ನೋಡುತ್ತಾರೆ. ಅದು ಧಾರ್ಮಿಕ ನಂಬಿಕೆಗಳನ್ನು ಮೀರಿದೆ. ಆದಾಗ್ಯೂ, ಖಾಸಗಿ ವಲಯಗಳಲ್ಲಿ ಖಂಡಿತವಾಗಿಯೂ ಕೆಲವು ಚರ್ಚೆಗಳು ನಡೆಯುತ್ತಿದ್ದವು. ಆದರೆ ನಾನು ಕಥಕ್ಕಳಿಯನ್ನು ಕಲಾ ಪ್ರಕಾರವೆಂದು ಪರಿಗಣಿಸುತ್ತೇನೆ. ನನ್ನ ಮಗಳ ಹಾದಿಯಲ್ಲಿ ನಾನು ಯಾವುದೇ ಅಡೆತಡೆಗಳನ್ನು ನಿರೀಕ್ಷಿಸುವುದಿಲ್ಲ. ಇದು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಿಜಾಮ್ ಹೇಳಿದ್ದಾರೆ.

                 ಸಾಬ್ರಿ ಮೊದಲು ಚಡಯಮಂಗಲಂನ ಅರೋಮಲ್ ಅವರ ಬಳಿ ಕಥಕ್ಕಳಿಯ ಮೊದಲ ಪಾಠಗಳನ್ನು ಕಲಿತರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ತನ್ನ ಮನೆಯ ಹತ್ತಿರದ ಶಿಕ್ಷಕರಿಂದ ಮೋಹಿನಿಯಾಟ್ಟಂ ಕಲಿತಳು ಎಂದು ಆಕೆಯ ತಂದೆ ವಿವರಿಸಿದ್ದಾರೆ.

                  ಆದರೆ ಅವಳ ಮೊದಲ ಪ್ರೀತಿ ಕಥಕ್ಕಳಿ. ಎಡಮುಲಕಲ್‌ನ ಸರ್ಕಾರಿ ಜವಾಹರ್ ಹೈಸ್ಕೂಲ್‌ನಲ್ಲಿ 7ನೇ ತರಗತಿಯ ನಂತರ, ನಾನು ಸಾಬ್ರಿಯನ್ನು ಕಥಕ್ಕಳಿ ಕಲಿಯಲು ಬಯಸುತ್ತೀಯಾ ಎಂದು ಕೇಳಿದೆ. ಕಲಾಮಂಡಲಂ ಮಹಿಳೆಯರನ್ನು ಕೋರ್ಸ್‌ಗೆ ಸೇರಿಸಿಕೊಳ್ಳಲು ಆರಂಭಿಸಿದೆ ಎಂದು ಹೇಳಿದ್ದೆ, ಈ ವಿಷಯ ಕೇಳಿ ಅವಳು ತುಂಬಾ ಉತ್ಸುಕಳಾಗಿದ್ದಳು  ಎಂದು ನಿಜಾಮ್ ಹೇಳಿದರು.

                          ಕಥಕ್ಕಳಿಯಲ್ಲಿ ವಡಕ್ಕನ್ ಮತ್ತು ತೆಕ್ಕನ್ ಎಂಬ ಎರಡು ಪ್ರಕಾರಗಳಿವೆ. ಕಲಾಮಂಡಲದಲ್ಲಿ 8ನೇ ತರಗತಿಗೆ ದಾಖಲಾದ ವಿದ್ಯಾರ್ಥಿಯು ಪಿಜಿ ಪೂರ್ಣಗೊಳಿಸುವವರೆಗೆ 12 ವರ್ಷಗಳ ಕಾಲ ವ್ಯಾಸಂಗ ಮುಂದುವರಿಸಬಹುದು.

               2020-21 ಶೈಕ್ಷಣಿಕ ವರ್ಷದಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಮೊದಲ ಪ್ರವೇಶ ನೀಡಲಾಯಿತು. ಈಗ ನಾವು 11 ಹುಡುಗಿಯರನ್ನು ಹೊಂದಿದ್ದೇವೆ ಎಂಟನೇ ತರಗತಿಯಲ್ಲಿ ಮೂವರು, ಒಂಬತ್ತನೇ ತರಗತಿಯಲ್ಲಿ ನಾಲ್ವರು ಮತ್ತು 10 ನೇ ತರಗತಿಯಲ್ಲಿ ನಾಲ್ವರು ಇದ್ದಾರೆ ಎಂದು ಕಥಕ್ಕಳಿ ವೇಷ (ತೆಕ್ಕನ್) ಹೋಡಿ ಕಲಾಮಂಡಲಂ ರವಿಕುಮಾರ್ ವಿವರಿಸಿದ್ದಾರೆ. ಈ ವರ್ಷ, ಎಂಟನೇ ತರಗತಿಯಲ್ಲಿ ಮಹಿಳೆಯರಿಗೆ ಆರು ಸೀಟುಗಳು ಲಭ್ಯವಿವೆ. ನಮಗೆ 20 ಅರ್ಜಿಗಳು ಬಂದಿವೆ  ಎಂದು ವಿವರಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries